

ಹೆಚ್ಚುತ್ತಿರುವ ತಂತ್ರಜ್ಞಾನವು ವಯಸ್ಕರು ಮತ್ತು ಮಕ್ಕಳ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ಜನರು ತಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಹಲವಾರು ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರದ ಅಗತ್ಯವಿದೆ.
ಆದರೆ ಸಾಮಾಜಿಕ ಜಾಲತಾಣಲದಲ್ಲಿ ಕಣ್ಣುಗಳನ್ನು ಆರೋಗ್ಯಕರವಾಗಿಡಲು ಸುಲಭವಾದ ಪರಿಹಾರಗಳನ್ನು ಹೇಳಲಾಗುತ್ತದೆ. ಅನೇಕರು ಕೆಲವೊಂದು ಸಲಹೆಗಳನ್ನು ಅನುಸರಿಸುತ್ತಾರೆ.ಆದರೆ ಅಲ್ಲಿ ನೀಡಿರುವ ಸಲಹೆಗಳು ಎಷ್ಟರ ಮಟ್ಟಿಗೆ ಸತ್ಯವಾಗಿದೆ ಎಂಬುದು ತಿಳಿದಿರುವುದಿಲ್ಲ. ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರ ಕುರಿತು ವೈದ್ಯರು ಹೇಳಿದ್ದೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ವಿಡಿಯೋದಲ್ಲಿ ಬೆಳಿಗ್ಗೆ ಎದ್ದ ನಂತರ ಬಾಯಲ್ಲಿ ನೀರು ತುಂಬಿಕೊಂಡು ಕಣ್ಣಿಗೆ ಚಿಮುಕಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ. ದಣಿದ ಕಣ್ಣುಗಳಿಗೆ ವಿಶ್ರಾಂತಿ ನೀಡಲು ಇದು ಉತ್ತಮ ಮಾರ್ಗವಾಗಿದೆ ಎಂದು ಹೇಳಲಾಗಿದೆ. ತಜ್ಞರು ಕೂಡ ಈ ಬೆಳಗಿನ ಆಚರಣೆಯನ್ನು ಅಳವಡಿಸಿಕೊಳ್ಳುವುದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ ಎಂದಿದ್ದಾರೆ.
ಬೆಳಗ್ಗೆ ನಿಮ್ಮ ಬಾಯಿಯಲ್ಲಿ ನೀರನ್ನು ತುಂಬಿಸಿ ಮತ್ತು ನಿಮ್ಮ ಕಣ್ಣುಗಳ ಮೇಲೆ ತಣ್ಣನೆಯ ನೀರನ್ನು ಚಿಮುಕಿಸುವುದು ಕಣ್ಣಿನ ಸ್ನಾಯುಗಳನ್ನು ಉತ್ತೇಜಿಸಲು ಮತ್ತು ನಿಮ್ಮ ಚರ್ಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಬಾಯಿಯಲ್ಲಿನ ನೀರಿನ ಒತ್ತಡವು ಕಣ್ಣಿನ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ. ಮುಖದ ಮೇಲೆ ತಣ್ಣನೆಯ ನೀರು ಕಣ್ಣಿನಿಂದ ಒಣ ಲೋಳೆ ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ಕಣ್ಣುಗಳನ್ನು ನಯಗೊಳಿಸುವ ಗ್ರಂಥಿಗಳನ್ನು ಉತ್ತೇಜಿಸುತ್ತದೆ.
ವೈದ್ಯರ ಪ್ರಕಾರ, ಟ್ಯಾಪ್ ನೀರು ನೇರವಾಗಿ ಕಣ್ಣಿಗೆ ಹೋಗುವುದು ಹಾನಿಕಾರಕ ಎಂದು ಕೆಲವರು ನಂಬುತ್ತಾರೆ. ವಾಸ್ತವವಾಗಿ, ನೀರು ಕಲ್ಮಶಗಳನ್ನು ಹೊಂದಿರುತ್ತದೆ. ಇದು ಕಣ್ಣಿನ ಕಿರಿಕಿರಿ ಮತ್ತು ಸೋಂಕನ್ನು ಉಂಟುಮಾಡುತ್ತದೆ. ನೀರಿನ ಒತ್ತಡವು ಕಣ್ಣೀರಿನ ಫಿಲ್ಮ್ ಅನ್ನು ಸಹ ಹಾನಿಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ಬಳಸುವ ನೀರಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ಬಾಯಿಯಲ್ಲಿ ನೀರು ತುಂಬಿಕೊಂಡು ಕಣ್ಣಿಗೆ ಚಿಮುಕಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ ಎಂಬ ಮಾತು ನಿಜವೆಂದು ಸಾಬೀತಾಗಿದೆ. ತಜ್ಞರ ಪ್ರಕಾರ, ಕಣ್ಣುಗಳನ್ನು ಆರೋಗ್ಯವಾಗಿಡಲು ಇದು ಉತ್ತಮ ಮಾರ್ಗವಾಗಿದೆ.