FACT CHECK | ಅರ್ಚಕರ ಜತೆಗೆ ಚಿರತೆ ಕುಟುಂಬ ಮಲಗುತ್ತಿದ್ದ ವೈರಲ್ ವಿಡಿಯೋದ ನಿಜಾಂಶವೇನು?

cheetah-in-pipleshwar-mahadev-temple-in-rajasthan
Published on

ಬೆಂಗಳೂರು: " ರಾಜಸ್ಥಾನದ ಸಿರೋಹಿ ಗ್ರಾಮದಲ್ಲಿರುವ ಪಿಪಿಲೇಶ್ವರ ದೇವಸ್ಥಾನದ ಅರ್ಚಕರ ಜತೆ ಚಿರತೆಯ ಕುಟುಂಬವೊಂದು ಪ್ರತಿ ದಿನ ರಾತ್ರಿ ಹೊತ್ತು ಮಲಗುವುದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ" ಇಂಥದ್ದೇ ಅರ್ಥ ಬರುವ ಶೀರ್ಷಿಕೆ ಹೊತ್ತ ಈ ವಿಡಿಯೋ ಕೆಲವು ತಿಂಗಳುಗಳಿಂದ ಭಾರತದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಸತ್ಯಾಂಶವೇನು?

ನಿಜವಾಗಿಯೂ ಈ ವಿಡಿಯೋ ಸಿರೋಹಿ ಗ್ರಾಮದ ಪಿಪಿಲೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ್ದಲ್ಲ ಎಂಬ ಅಂಶ ಫ್ಯಾಕ್ಟ್​ಚೆಕ್​ನಲ್ಲಿ ನಿರೂಪಿಸಲ್ಪಟ್ಟಿದೆ. ಗೂಗಲ್​ನಲ್ಲಿ 'man sleeping with cheetah' ಎಂದು ಹುಡುಕಾಟ ನಡೆಸಿದಾಗ, 6 ನಿಮಿಷಕ್ಕೂ ಹೆಚ್ಚು ಅವಧಿಯ ವಿಡಿಯೋ ಒಂದು ಯೂಟ್ಯೂಬ್​ನಲ್ಲಿ ಕಾಣಸಿಕ್ಕಿದೆ.

ಡಾಲ್ಫ್​ ಸಿ ವೋಲ್ಕರ್ ಎಂಬುವವರು 2019ರ ಜನವರಿ 21ರಂದು ಅಪ್ಲೋಡ್ ಮಾಡಿದ ವಿಡಿಯೋ ಅದು. ಭಾರತದ ಸೋಷಿಯಲ್​ ಮೀಡಿಯಾ ಗ್ರೂಪ್​ಗಳಲ್ಲಿ ಶೇರ್ ಆಗುತ್ತಿರುವ ಈ ವಿಡಿಯೋದ ಪೂರ್ಣ ದೃಶ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net