FACT CHECK | ಬಿಜೆಪಿ ಗೆದ್ರೆ ಹಿಂದು ಧರ್ಮಕ್ಕೆ ಮತಾಂತರಗೊಳ್ಳುವೆ, ಭಾಗ್ಯರಾಜ ತ್ರಿಪಾಠಿ ಅಂತ ಹೆಸರು ಬದಲಾಯಿಸಿಕೊಳ್ಳುವೆ - ಓವೈಸಿ ಹೀಗೆ ಹೇಳಿದ್ರಾ?

Owaisi
Published on

ಬೆಂಗಳೂರು: 'ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್​ಎಂಸಿ) ಚುನಾವಣೇಲಿ ಬಿಜೆಪಿ ಗೆದ್ರೆ ಹಿಂದು ಧರ್ಮಕ್ಕೆ ಮತಾಂತರಗೊಳ್ಳುವೆ. ನನ್ನ ಹೆಸರನ್ನು ಭಾಗ್ಯರಾಜ ತ್ರಿಪಾಠಿ ಅಂತ ಬದಲಾಯಿಸಿಕೊಳ್ತೇನೆ'. - ಹೀಗಂತ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಚುನಾವಣಾ ಫಲಿತಾಂಶ ಬಂದಿದೆ. ಬಿಜೆಪಿ ಎರಡನೇ ಸ್ಥಾನಕ್ಕೇರಿ ಭರ್ಜರಿ ಎಂಟ್ರಿ ಕೊಟ್ಟಿದೆ. ಈಗ ಓವೈಸಿ ಮತಾಂತರದ ಹೇಳಿಕೆ ಮುನ್ನೆಲೆಬಂದಿದೆ. ವಾಸ್ತವದಲ್ಲಿ ಆಗಿದ್ದೇನು? ನಿಜಕ್ಕೂ ಓವೈಸಿ ಅಂಥದ್ದೊಂದು ಹೇಳಿಕೆ ಕೊಟ್ಟಿದ್ರಾ? ಈ ಸಂಬಂಧ ಗೂಗಲ್​ನಲ್ಲಿ ಸರ್ಚ್ ಮಾಡಿದಾಗ ಅವರ ಹೇಳಿಕೆ ಎಂದು ಬಿಂಬಿಸಲ್ಪಟ್ಟ ಪೋಸ್ಟ್​ ಫೇಸ್​ಬುಕ್ ಮತ್ತು ಟ್ವಿಟರ್​ನಲ್ಲಿ ಗೋಚರಿಸಿದ್ದವು. ಆ ಪೋಸ್ಟ್​ಗಳಿಗೆ ಬಹಳಷ್ಟು ಜನ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

The UnPaid Times ಎನ್ನುವ ಟ್ವಿಟರ್ ಖಾತೆಯಲ್ಲಿ ಇದು ಮೊದಲು ಗೋಚರಿಸಿತ್ತು. ಈ ಟ್ವಿಟರ್ ಖಾತೆಯು ವಿಡಂಬನಾತ್ಮ ಸುದ್ದಿ ನೀಡಿವ ವೆಬ್​ತಾಣಕ್ಕೆ ಸೇರಿದ್ದಾಗಿದೆ. ಅವರು ಇಂಥದ್ದೊಂದು ಸುದ್ದಿ ಮಾಡಿ ಓವೈಸಿಯ ನಡವಳಿಕೆಯನ್ನು ವಿಡಂಬಿಸಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳದ ಜನರು ಅದು ನಿಜವಾಗಿಯೂ ಓವೈಸಿ ನೀಡಿದ ಹೇಳಿಕೆಯೆಂದೇ ಭಾವಿಸಿ ಪ್ರತಿಕ್ರಿಯಿಸಿದ ಪರಿಣಾಮ ಇದು. ಎಐಎಂಐಎಂ ಪಕ್ಷದ ವಕ್ತಾರ ಕೂಡ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಓವೈಸಿ ಅಂಥ ಹೇಳಿಕೆ ನೀಡಿಯೇ ಇಲ್ಲ ಎಂದಿರುವ ವರದಿಯೂ ಪ್ರಕಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net