Fact Check | ಗರ್ಭಾವಸ್ಥೆಯಲ್ಲಿ ನೆನೆಸಿದ ಬಾದಾಮಿ & ಒಣದ್ರಾಕ್ಷಿ ತಿನ್ನುವುದರಿಂದ ಮಗುವಿನ ಮೆದುಳು ಚುರುಕುಗೊಳ್ಳುತ್ತದೆಯೇ; ವೈದ್ಯರ ಅಭಿಪ್ರಾಯ ಏನು?

Untitled design - 2025-01-05T204346.090
Published on

ಪ್ರತಿಯೊಬ್ಬ ಗರ್ಭಿಣಿ ಮಹಿಳೆಯು ತನಗೆ ಹುಟ್ಟುವ ಮಗು ಎಲ್ಲಾ ಉತ್ತಮ ಗುಣಗಳಿಂದ ಆಶೀರ್ವದಿಸಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಮಗುವಿನ ಮನಸ್ಸು ಚುರುಕಾಗಿರಬೇಕು ಎಂದು ಬಯಸುತ್ತಾರೆ. ಗರ್ಭಾವಸ್ಥೆಯಲ್ಲಿ ಮನೆಯಲ್ಲಿನ ಹಿರಿಯರು ಮಗುವನ್ನು ಬುದ್ಧಿವಂತರನ್ನಾಗಿ ಮಾಡಲು ಅನೇಕ ರೀತಿಯ ವಸ್ತುಗಳನ್ನು ತಿನ್ನಲು ಸಲಹೆ ನೀಡುತ್ತಾರೆ.(Fact Check)

ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವಿಡಯೋವೊಂದು ಹರಿದಾಡುತ್ತಿದೆ. ಅದರಲ್ಲಿ ಗರ್ಭಿಣಿ ಮಹಿಳೆ ಗರ್ಭಾವಸ್ಥೆಯಲ್ಲಿ ಎರಡು ಆಹಾರವನ್ನು ಸೇವಿಸಿದರೆ ಮಗುವಿನ ಮೆದುಳು ಕಂಪ್ಯೂಟರ್‌ನಂತೆ ಆಗುತ್ತದೆ. ರಾತ್ರಿ ಮಲಗುವ ಮುನ್ನ ಎರಡು ಬಾದಾಮಿ ಮತ್ತು 5-6 ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಭ್ರೂಣದ ಮೆದುಳು ಚುರುಕಾಗುತ್ತದೆ ಎಂದು ಹೇಳಲಾಗುತ್ತದೆ.

ಆದರೆ ಈ ವಿಷಯದಲ್ಲಿ ಎಷ್ಟು ಸತ್ಯಾಂಶವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನೆನೆಸಿದ ಬಾದಾಮಿ ಮತ್ತು ಒಣದ್ರಾಕ್ಷಿ ಮಗುವಿನ ಮೆದುಳಿಗೆ ತುಂಬಾ ಪ್ರಯೋಜನಕಾರಿ. ಆದರೆ ಗರ್ಭಿಣಿ ಮಹಿಳೆ ಅದನ್ನು ಸೇವಿಸುವ ಸರಿಯಾದ ವಿಧಾನವನ್ನು ತಿಳಿದಿರಬೇಕು ಎಂದು ಎಂಬುದು ಅವರ ಅಭಿಪ್ರಾಯವಾಗಿದೆ. ಡ್ರೈಫ್ರೂಟ್ಸ್​​ಗಳಲ್ಲಿ ಕೊಬ್ಬಿನಾಮ್ಲಗಳಿವೆ ಎಂದು ವೈದ್ಯರು ಹೇಳುತ್ತಾರೆ. ಈ ಕೊಬ್ಬಿನಾಮ್ಲಗಳನ್ನು ಸರಿಯಾಗಿ ಬಳಸಿದಾಗ ಭ್ರೂಣದ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ವೈದ್ಯರ ಪ್ರಕಾರ, ನಮ್ಮ ಮೆದುಳಿನಲ್ಲಿರುವ ನ್ಯೂರಾನ್‌ಗಳ ಮೇಲೆ ಕೊಬ್ಬಿನಾಮ್ಲಗಳ ಪದರವಿದೆ. ಇದು ಆಕ್ಸಿಡೇಟಿವ್ ಒತ್ತಡದಿಂದ ನರಕೋಶಗಳನ್ನು ರಕ್ಷಿಸುತ್ತದೆ. ಒಣ ಹಣ್ಣುಗಳು ಭ್ರೂಣದಲ್ಲಿನ ನ್ಯೂರಾನ್‌ಗಳ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ಭವಿಷ್ಯದ ಅಸಹಜತೆಗಳಿಂದ ಮಗುವನ್ನು ರಕ್ಷಿಸುತ್ತದೆ.

ಯಾವಾಗಲೂ ಗರ್ಭಿಣಿಯರಿಗೆ ಸಿಪ್ಪೆ ಸುಲಿದ ಒಣ ಹಣ್ಣುಗಳನ್ನು ನೆನೆಸಿದ ನಂತರ ತಿನ್ನಲು ಸಲಹೆ ನೀಡುತ್ತಾರೆ. ಒಣ ಹಣ್ಣುಗಳನ್ನು ಹುರಿಯುವುದಕ್ಕಿಂತ ಇದು ಉತ್ತಮ ಮತ್ತು ಆರೋಗ್ಯಕರ ವಿಧಾನವಾಗಿದೆ. ನೆನಸಿದ ಬಾದಾಮಿ ಮತ್ತು ಒಣದ್ರಾಕ್ಷಿ ಭ್ರೂಣದ ಮೆದುಳನ್ನು ಚುರುಕುಗೊಳಿಸುತ್ತದೆ ಎಂಬುದು ಸಂಪೂರ್ಣವಾಗಿ ನಿಜ ಎಂದು ತಜ್ಞರ ಹೇಳುತ್ತಾರೆ. ಜತೆಗೆ ಗರ್ಭಿಣಿ ಮಹಿಳೆಯರು ಸಾಕಷ್ಟು ನಿದ್ರೆ, ಸಾಕಷ್ಟು ನೀರು ಕುಡಿಯುವುದು ಮತ್ತು ಆರೋಗ್ಯಕರ ಆಹಾರ ಸೇವನೆಯು ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net