Fact Check: ‘ಬೆಂಗಳೂರಲ್ಲಿ 188 ವರ್ಷದ ವ್ಯಕ್ತಿಯ ರಕ್ಷಣೆ’! ಈ ಸುದ್ದಿಯ ಹಿಂದಿನ ಅಸಲಿ ಕಥೆ ಏನು ಗೊತ್ತಾ?

Fact Check
Published on

ಮಧ್ಯಪ್ರದೇಶ: ಭೂಮಿ ಮೇಲೆ ಅತೀ ಹೆಚ್ಚು ವರ್ಷ ಬದುಕಿದವರು ಯಾರು ಅಂದರೆ ಒಂದಿಷ್ಟು ಹೆಸರು ಹೇಳಬಹುದು. ಜಪಾನ್, ಚೀನಾದಂತಹ ದೇಶದಲ್ಲಿ ನೋಡಬಹುದು ಅಲ್ಲಿನ ಜನರ ಜೀವಿತಾವಧಿ ಹೆಚ್ಚಾಗಿಯೆ ಇದ್ದು ಶತಾಯುಷಿಗಳನ್ನು ನೋಡಬಹುದು. ಆದ್ರೆ ಭಾರತದಲ್ಲಿಯೂ ಒಬ್ಬರು ಶತಾಯುಷಿ ಇದ್ದಾರೆ. ಅವರು ಬರೋಬ್ಬರಿ 188 ವರ್ಷ ಬದುಕಿದ್ದಾರೆ ಎಂದು ಹೇಳಲಾಗುತ್ತಿರುವ ಸುದ್ದಿಯೊಂದು ಭಾರೀ ವೈರಲ್ ಆಗಿದೆ. (Fact Check )

ಬೆಂಗಳೂರು ಸಮೀಪದ ಗುಹೆಯೊಂದರಲ್ಲಿ ತಂಗಿದ್ದ 188 ವರ್ಷ ವೃದ್ಧನನ್ನು ಸ್ಥಳೀಯರು ಹೊರಗೆ ಕರೆತಂದಿದ್ದಾರೆ. ಆತನಿಗೆ 188 ವರ್ಷ ಎಂದು ಹೇಳಲಾಗಿರುವ ವೃದ್ಧನ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ವಿಡಿಯೋ ಅಸಲಿ ಕಥೆಯೇ ( Fact Check ) ಬೇರೆ ಇದೆ. ಈ ವ್ಯಕ್ತಿ ಯಾರು? ಈ ಘಟನೆ ನಡೆದಿದ್ದು ಎಲ್ಲಿ? ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ ಎಂದು ವಿಡಿಯೋ  ಹರಿದಾಡುತ್ತಿದ್ದು ನೋಡುಗರು ಅಚ್ಚರಿಯ ಜೊತೆಗೆ ಶಾಕ್‌ಗೂ ಒಳಗಾಗಿದ್ದಾರೆ. ಆದರೆ ಈ ವಿಡಿಯೋದಲ್ಲಿರುವುದು ಸಿಯಾರಾಮ್ ಬಾಬಾ ಎಂದು ಬಳಕೆದಾರರೊಬ್ಬರು ಅವರನ್ನು ಗುರುತು ಹಿಡಿದಿದ್ದು,  188 ವರ್ಷವಲ್ಲ, ಇವರ ನಿಜವಾದ ವಯಸ್ಸು 110 ವರ್ಷ ಎಂದು ಕಾಮೆಂಟ್​​ ಮಾಡಿದ್ದಾರೆ.

ಈ ವೃದ್ಧ   ಮಧ್ಯಪ್ರದೇಶ ಮೂಲದ ಸಿಯಾರಾಮ್ ಬಾಬಾ ಎಂಬುದು ಗೊತ್ತಾಗಿದೆ.  ಈ ವೃದ್ಧ 110 ವರ್ಷ ವಯಸ್ಸಿನವರು ಎಂದು ಅಂದಾಜಿಸಲಾಗಿದೆ. ರಾಮನ ಪರಮ ಭಕ್ತನಾಗಿದ್ದ ಈತ 10 ವರ್ಷಗಳ ಕಾಲ ಒಂದೇ ಕಾಲಿನ ಮೇಲೆ ಕಠಿಣ ತಪಸ್ಸು ಮಾಡಿದ್ದಾರೆಂದು ಹೇಳಲಾಗುತ್ತದೆ. ಆದರೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ಗೊತ್ತಿಲ್ಲ..ಸಿಯಾರಾಮ್ ಬಾಬಾ ರಾಮನಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. 110 ವರ್ಷ ವಯಸ್ಸಿನ ಈ ಬಾಬಾ  ಕನ್ನಡಕವಿಲ್ಲದೆ ಪುಸ್ತಕ ಓದುತ್ತಾರೆ.  ಈ ಇಳಿವಯಸ್ಸಿನಲ್ಲಿಯೂ ನಡೆದಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಈಗ ಅವರ ದೇಹ ಸೊರಗಿದ್ದು ಅವರೆಂದು ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತದೆ.

ಸಿಯಾರಾಮ್ ಬಾಬಾ ಅವರ ನಿಖರ ವಯಸ್ಸು ತಿಳಿದಿಲ್ಲ, ಆದರೆ ಅವರು 110 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಎಂದು ಹೇಳಲಾಗುತ್ತದೆ. ಸದ್ಯ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net