ಫೇಸ್​ಬುಕ್​ ಫ್ರೆಂಡ್​ನ ಮದುವೆಯಾಗಲು ಭಾರತಕ್ಕೆ ಬಂದ ವಿದೇಶಿ ಬೆಡಗಿ!

Facebook
Published on

ಇಟಾ: ಎರಡು ದೇಶಗಳ ಇಬ್ಬರ ನಡುವಿನ ಫೇಸ್​ಬುಕ್​ ಫ್ರೆಂಡ್​ಷಿಪ್​ ಮದುವೆಯಲ್ಲಿ ಕೊನೆಯಾಗಿದೆ. ಅದೇ ಕಾರಣಕ್ಕೆ ಸ್ವೀಡನ್ ಯುವತಿಯೊಬ್ಬಳು ಭಾರತಕ್ಕೆ ಬಂದು ವಿವಾಹವಾಗಿದ್ದಾಳೆ. ಉತ್ತರಪ್ರದೇಶದಲ್ಲಿ ಇಬ್ಬರ ಮಧ್ಯೆ ಜ. 27ರಂದು ವಿವಾಹವಾಗಿದೆ.

ಉತ್ತರಪ್ರದೇಶದ ಪವನ್ ಕುಮಾರ್​ ಮತ್ತು ಸ್ವೀಡನ್​ ಯುವತಿ ಕ್ರಿಸ್ಟೆನ್​ ಲೀಬರ್ಟ್​ ಮದುವೆಯಾದ ಜೋಡಿ. ಇಲ್ಲಿನ ಇಟಾ ಎಂಬಲ್ಲಿನ ಸ್ಥಳೀಯ ಶಾಲೆಯೊಂದರಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಸರಳವಾಗಿ ವಿವಾಹವಾಗಿದ್ದಾರೆ. ಪವನ್​ಕುಮಾರ್​ ಬಿ.ಟೆಕ್ ಪದವೀಧರನಾಗಿದ್ದು, ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾನೆ.

ಇವರಿಬ್ಬರೂ 2012ರಲ್ಲಿ ಫೇಸ್​ಬುಕ್​ನಲ್ಲಿ ಫ್ರೆಂಡ್ ಆಗಿದ್ದರು. ಈ ಹಿಂದೆಯೂ ಭಾರತಕ್ಕೆ ಬಂದಿದ್ದಾಗಿ ಹೇಳಿಕೊಂಡಿರುವ ಈಕೆ, ನಾನು ಭಾರತವನ್ನು ಪ್ರೀತಿಸುತ್ತೇನೆ. ಈ ಮದುವೆಯ ಕುರಿತು ಸಂತೋಷವಾಗಿದ್ದೇನೆ ಎಂಬುದಾಗಿ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net