ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ AK-47 ಗಿಫ್ಟ್ ಕೊಟ್ಟ ತೃಣಮೂಲ ಕಾಂಗ್ರೆಸ್ ನಾಯಕ

Trinamool leader gifts A
Published on

ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ನಾಯಕ ರಿಯಾಜುಲ್ ಹಕ್ ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದಂದು ಪತ್ನಿಗೆ ಎಕೆ-47 ರೈಫಲ್ ಅನ್ನು ಉಡುಗೊರೆಯಾಗಿ ನೀಡಿದ ನಂತರ ವಿವಾದದ ಸುಳಿಯಲ್ಲಿ ಸಿಲುಕೊಂಡಿದ್ದಾರೆ.

ಟಿಎಂಸಿಯ ಮಾಜಿ ನಾಯಕ ರಿಯಾಜುಲ್, ಪತ್ನಿ ಸಬೀನಾ ಯಾಸ್ಮಿನ್ ಎಕೆ -47 ಗನ್ ಹಿಡಿದಿರುವ ಫೋಟೋವನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡರು. ನಂತರ, ಸ್ಥಳೀಯ ಭಾರತೀಯ ಜನತಾ ಪಕ್ಷದ ನಾಯಕರು ಮತ್ತು ಸಿಪಿಎಂ 'ತಾಲಿಬಾನ್ ಆಡಳಿತವನ್ನು ಉತ್ತೇಜಿಸುತ್ತಿದ್ದಾರೆಂದು' ಅವರನ್ನು ಟೀಕಿಸಿದ ನಂತರ ರಿಯಾಜುಲ್ ಪೋಸ್ಟ್​​​ನ್ನು ತೆಗೆದು ಹಾಕಿದ್ದಾರೆ.

"ನನ್ನ ಪತ್ನಿ ಆಟಿಕೆ ಬಂದೂಕು ಹಿಡಿದಿದ್ದರಿಂದ ಯಾವುದೇ ಅಕ್ರಮ ನಡೆದಿಲ್ಲ. ನನ್ನ ವಿರುದ್ಧದ ಆರೋಪ ನಕಲಿಯಾಗಿದ್ದು, ಅದು ನಕಲಿ ಗನ್" ಎಂದು ತನ್ನ ನಡೆಯನ್ನು ರಿಯಾಜುಲ್ ಸಮರ್ಥಿಸಿಕೊಂಡಿದ್ದಾರೆ.

ಬಿರ್‌ಭೂಮ್‌ನ ಬಿಜೆಪಿ ಜಿಲ್ಲಾಧ್ಯಕ್ಷ ಧ್ರುಬೋ ಸಹಾ, "ರಿಯಾಜುಲ್‌ಗೆ ಬಂದೂಕು ಎಲ್ಲಿಂದ ಸಿಕ್ಕಿತು ಎಂಬುದನ್ನು ತನಿಖೆಗೆ ಒಳಪಡಿಸಬೇಕು. ನಾನು ಅವರ ಫೇಸ್‌ಬುಕ್ ಪೋಸ್ಟ್ ನೋಡಿದ್ದೇನೆ. ಅವರು ಮಾಜಿ ಟಿಎಂಸಿ ನಾಯಕ ಮತ್ತು ರಾಜ್ಯ ಉಪಸಭಾಪತಿಯ ಆಪ್ತರು, ಇದು ಯಾವ ಸಂದೇಶವನ್ನು ನೀಡುತ್ತದೆ? ಇದು ತಾಲಿಬಾನ್ ಆಡಳಿತದ ಪ್ರಚಾರವೇ? ಅವರು ಮುಂದಿನ ಪೀಳಿಗೆಯನ್ನು ಜಿಹಾದಿಗಳಾಗಲು ತಳ್ಳಲು ಪ್ರಯತ್ನಿಸುತ್ತಿದ್ದಾರೆಯೇ?" ಎಂದು ಪ್ರಶ್ನೆ ಮಾಡಿದ್ದಾರೆ.

"ಆಡಳಿತ ಪಕ್ಷವು ಸಾರ್ವಜನಿಕ ವೇದಿಕೆಗಳಲ್ಲಿ ಇಂತಹ ಬಂದೂಕುಗಳನ್ನು ಪ್ರದರ್ಶಿಸುತ್ತಿರುವ ಕುರಿತು ತಕ್ಷಣವೇ ಪರಿಶೀಲಿಸಬೇಕು" ಎಂದು ಬಿರ್ಭಮ್ ಸಿಪಿಐಎಂ ನಾಯಕ ಸೋಂಜಿಬ್ ಮುಲ್ಲಿಕ್ ಹೇಳಿದ್ದಾರೆ.

ರಿಯಾಜುಲ್ ಒಮ್ಮೆ ತೃಣಮೂಲದ ಅಲ್ಪಸಂಖ್ಯಾತರ ಸೆಲ್‌ನ ರಾಮ್‌ಪುರಹತ್-1 ಬ್ಲಾಕ್‌ನ ಅಧ್ಯಕ್ಷರಾಗಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಆದರೆ, ಕಳೆದೆರಡು ತಿಂಗಳ ಹಿಂದೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net