ಐಸಿಎಂಎಐ ಮತ್ತು ಸಿಎಂಎ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

IMCA
Published on

ದಿ ಇನ್ಸ್ಟಿಟ್ಯೂಟ್​ ಆಫ್​ ಕಾಸ್ಟ್​ ಅಕೌಂಟೆಂಟ್ಸ್​ ಆಫ್​ ಇಂಡಿಯಾ (ಐಸಿಎಂಎಐ) ಐಸಿಎಂಎಐ ಮತ್ತು ಸಿಎಂಎ ಪರೀಕ್ಷೆ (ಜೂನ್​ 2020) ಯ ಆನ್​ಲೈನ್​ ಅರ್ಜಿ ಸಲ್ಲಿಕೆಯ ದಿನಾಂಕನ್ನು ಏಪ್ರಿಲ್​ 20ರವರೆಗೆ ವಿಸ್ತರಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯಥಿರ್ಗಳು ಅಧಿಕೃತ ವೆಬ್​ಸೈಟ್ https://icmai.in​ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಇಲ್ಲ: ಸಿಎಂಎ ಪರೀಕ್ಷೆಯ ದಿನಾಂಕದ ಬಗ್ಗೆ ಐಸಿಎಂಎಐ ಯಾವುದೇ ಬದಲಾವಣೆಯನ್ನು ತಿಳಿಸಿಲ್ಲ. ಈ ಹಿಂದೆ ತಿಳಿಸಲಾದ ಪ್ರಕಾರ ಐ ಸಿಎಂಎಐ ಸಿಎಂಎ ಫೌಂಡೇಷನ್​ ಪರೀಕ್ಷೆ (ಜೂನ್​ 2020) ಜೂನ್​ 11 ರಿಂದ 14 ವರೆಗೆ ಹಾಗೂ ಸಿಎಂಎ ಇಂಟರ್​ಮೀಡಿಯೇಟ್​ ಪರೀಕ್ಷೆ ಮತ್ತು ಅಂತಿಮ ಪರೀಕ್ಷೆ ಜೂನ್​ 11 ರಿಂದ 18 ವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net