ಪುತ್ತೂರಿಗೆ ೩೮೦ ಕೆಎಸ್‌ಆರ್‌ಟಿಸಿ ಸಿಬ್ಬಂದಿ - ಶಾಸಕ ಅಶೋಕ್‌ಕುಮಾರ್ ರೈ ಮಾಹಿತಿ - ತಡೆರಹಿತ ಬಸ್ ಸಂಚಾರಕ್ಕೆ ಚಾಲನೆ

PTR_14 JUL_2
Published on

ಪುತ್ತೂರು: ಶಾಲಾ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪುತ್ತೂರು ಸಿಟಿ ಬಸ್ ಪ್ರಾರಂಭ ಮಾಡುವ ಯೋಚನೆಯಿದೆ. ಎರಡು ಮೂರು ವರ್ಷಗಳಿಂದ ನೇಮಕಾತಿಯಾಗದೆ ಸಿಬ್ಬಂದಿ ಕೊರತೆಯಿತ್ತು. ಈಗ ಪುತ್ತೂರಿಗೆ ೩೮೦ ಸಿಬ್ಬಂದಿ ಆಗಮಿಸಿದ್ದಾರೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಸರ್ಕಾರಿ ಬಸ್ ನಿಲ್ದಾಣದಲ್ಲಿ ಪುತ್ತೂರು - ಮಂಗಳೂರು ತಡೆರಹಿತ ಬಸ್ ಸಂಚಾರಕ್ಕೆ ಚಾಲನೆ ನೀಡಿ, ಶಕ್ತಿ ಯೋಜನೆಯ ಫಲಾನುಭವಿಗಳು ೫೦೦ ಕೋಟಿ ತಲುಪಿದ ಹಿನ್ನೆಲೆಯಲ್ಲಿ ನಡೆದ ಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗ ಹೊಸ ಪೂಜಾರಿ ಮಾತನಾಡಿ, ಶಕ್ತಿ ಯೋಜನೆ ಮೂಲಕ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ೬.೫೦ ಲಕ್ಷ ಟಿಕೆಟ್ ಬಳಕೆಯಾಗಿದೆ. ಜನರು ಸರ್ಕಾರಿ ಬಸ್ ಹೆಚ್ಚು ಬಳಸುವ ಕಾರಣ ಹೆಚ್ಚುವರಿ ಬಸ್ ಸೇವೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸುರಕ್ಷಿತ ಚಾಲನೆ ಮಾಡಿದ ಚಾಲಕರಾದ ಉದಯಕುಮಾರ್, ರಾಜು ಗಜಕೋಶ, ಗಿರಿಧರ, ನವಿನ್ಚಂದ್ರ, ಅಮೋಘಸಿದ್ಧ, ಬಾಲಕೃಷ್ಣ ಅವರನ್ನು ಗೌರವಿಸಲಾಯಿತು.

ಪುಡಾ ಅಧ್ಯಕ್ಷ ಅಮಳರಾಮಚಂದ್ರ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ವಿಭಾಗೀಯ ಸಂಚಾಲನಾ ಅಧಿಕಾರಿ ಜಯಶಾಂತ್, ಬ್ಲಾಕ್ ಕಾಂಗ್ರೆಸ್ ವಿಟ್ಲ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪುತ್ತೂರು ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಸ್ವಾಗತಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಂತೋಷ್ ಭಂಡಾರಿ ವಂದಿಸಿದರು. ಮಾದವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರಿನಿಂದ ಮಂಗಳೂರಿಗೆ ಎಕ್ಸ್‌ಪ್ರೆಸ್ ಬಸ್ ಓಡಿಸಬೇಕು ಎಂಬ ಜನರ ಬೇಡಿಕೆಯಿತ್ತು. ಈಗ ಬಸ್ ಪ್ರಾರಂಭವಾಗಿ ನೇರ ಹೋಗುವವರಿಗೆ ಅನುಕೂಲಕರವಾಗಿದೆ. ಪುತ್ತೂರು ಹಾಗೂ ವಿಟ್ಲ ಜನರಿಗೆ ಅನುಕೂಲವಾಗುವಂತೆ ವೊಲ್ವೋ ಸ್ಲೀಪರ್ ಬಸ್ ಸೇವೆ ಪ್ರಾರಂಭ ಮಾಡಲಾಗುವುದು.

| ಅಶೋಕ್ ಕುಮಾರ್ ರೈ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net