

ಕೊಕ್ಕರ್ಣೆ: ಕರ್ನಾಟಕ ವಾಣಿಜ್ಯ ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)ಯ ಆಡಿಷನ್ ರಫ್ತು ಶ್ರೇಷ್ಠತಾ ಪ್ರಶಸ್ತಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಆದಿತ್ಯ ಎಕ್ಸ್‌ಪೋರ್ಟ್ಸ್ ಹಲುವಳ್ಳಿ ಪೇತ್ರಿ ಸ್ವೀಕರಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ, ಪ್ರಮುಖರಾದ ಎಂ.ಜಿ.ಬಾಲಕೃಷ್ಣ, ಉಪಾಧ್ಯಕ್ಷ ಉಮಾ ರೆಡ್ಡಿ, ಮಾಜಿ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ, ಚೇರ್ಮನ್ ತಿಪ್ಪೇಶಪ್ಪ ಬಿ.ಸಿ., ಅಡ್ವೈಸರ್ ಡಾ.ಜೆ.ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು. ಹಿರಿಯಡ್ಕ ಉದ್ಯಮಿ ಮಹಾಲಸಾ ಎಕ್ಸ್‌ಪೋರ್ಟ್ಸ್‌ನ ಬಿ.ರೋಹಿದಾಸ ಪೈ, ಪ್ರಿಯಾ ಆರ್.ಪೈ ದಂಪತಿ ಪುತ್ರ.