ಕ್ರೀಡಾಕೂಟದಲ್ಲಿ ಎಕ್ಸಲಂಟ್​ ಶಾಲೆ ವಿದ್ಯಾರ್ಥಿಗಳ ಸಾಧನೆ

Excellent performance of school students in the sports event
ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದ ಎಕ್ಸಲಂಟ್​ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಿದ್ದಾರೆ.
Published on

ವಿಜಯಪುರ : ಇಲ್ಲಿನ ಎಕ್ಸಲಂಟ್​ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ೇತ್ರ ಶಿಕ್ಷಣಾಧಿಕಾರ ಕಾರ್ಯಾಲಯ, ನಗರ ವಲಯ ವಿಜಯಪುರ ಮತ್ತು ಕಪಿಲ ಪಬ್ಲಿಕ್​ ಸ್ಕೂಲ್​ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿ ಸಮೃದ್ಧಿ ಬೋವಿ 3 ಕಿಮೀ. ನಡಿಗೆಯಲ್ಲಿ ದ್ವೀತಿಯ ಸ್ಥಾನ ಮತ್ತು ಬಾಲಕಿಯರ ವಾಲಿಬಾಲ್​ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಬಾಲಕರ ಥ್ರೋಬಾಲ್​ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರ್ಮನ್​ ಬಸವರಾಜ ಕೌಲಗಿ, ನಿರ್ದೇಶಕ ರಾಜಶೇಖರ ಕೌಲಗಿ, ಮುಖ್ಯ ಗುರು ಎಂ.ಐ. ಬಿರಾದಾರ, ದೈಹಿಕ ಶಿಕ್ಷಕ ಆರ್​.ಕೆ. ದೇಶಪಾಂಡೆ, ಭಾರತಿ ಕಪ್ಪೇನವರ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net