

ನವದೆಹಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಸರಣಿ ಸೋಲಿನಿಂದ ತೀವ್ರ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಜಾಗತಿಕ ಮಟ್ಟದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಿರುತ್ತದೆ. ಇಲ್ಲಿನ ಮಾಜಿ ಹಾಗೂ ಹಾಲಿ ಆಟಗಾರರು ತಾವು ಟ್ರೋಲ್ ಆಗಿದ್ದಲ್ಲದೆ ತಮ್ಮ ದೇಶವನ್ನು ತೀವ್ರ ಅಪಹಾಸ್ಯಕ್ಕೀಡು ಮಾಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಪಾಕ್ ಒಂದಿಲ್ಲೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿರುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಭಾರತೀಯರು ಪಾಕ್ಅನ್ನು ಸಖತ್ ಟ್ರೋಲ್ ಮಾಡಿದ್ದಾರೆ.
ಯುಎಸ್ಎ-ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ಚಾಂಪಿಯನ್ ಆಗಿದ್ದು, ಇದು ಹಳೆಯ ವಿಚಾರ. ಆದರೆ, ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ನಿದಾ ದಾರ್ ಅವರಿಗೆ ಇದು ಹೊಸ ವಿಷಯವಾಗಿದ್ದು, ಎರಡನೇ ಬಾರಿ ಕಪ್ ಗೆದ್ದ ಟೀಮ್ ಇಂಡಿಯಾಗೆ ಶುಭಾಶಯ ಕೋರಿರುವ ನಿದಾ ದಾರ್ ವಿರಾಟ್ ಹಾಗೂ ರೋಹಿತ್ಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ನಿದಾ ದಾರ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ. ನಮ್ಮ ಪ್ರಕಾರ ಪಾಕಿಸ್ತಾನದಲ್ಲಿ ಇಂಟರ್ನೆಟ್ ಸ್ಲೋ ಇರಬೇಕು ಅದಕ್ಕಾಗಿ ಇಷ್ಟು ದಿನ ತೆಗೆದುಕೊಂಡಿದೆ. ನಿದಾ ಅವರು ಮಾರ್ಸ್ಗೆ ಹೋಗಿದ್ದರು ಅನಿಸುತ್ತದೆ. ಭೂಮಿಗೆ ಬಂದ ಬಳಿಕ ವಿಚಾರ ತಿಳಿದು ಪೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿ ಟೀಕಿಸಿದ್ದಾರೆ.