

ಶಂಕರನಾರಾಯಣ: ಪ್ರತಿಯೊಬ್ಬರಿಗೂ ನಡತೆ ಮತ್ತು ಉತ್ತಮ ಸಂಸ್ಕೃತಿ ಬಹಳ ಮುಖ್ಯ. ಸಾಧಕರ ಮತ್ತು ಹಿರಿಯರ ಸಾಧನೆ ಪರಿಶ್ರಮ, ಜೀವನಗಾಥೆಗಳನ್ನು ತಿಳಿದುಕೊಂಡರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ದೊರೆಯುತ್ತದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು.
ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಜೆಸಿಐ ಶಂಕರನಾರಾಯಣ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕಿ ಕವಿತಾ ಎರ್ಮಾಳ್ ಶುಭಹಾರೈಸಿದರು. ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿದರು. ಅಕ್ಷತಾ ಪ್ರಾರ್ಥಿಸಿದರು. ಡಾ.ಗಿರೀಶ್ ಶ್ಯಾನ್‌ಭೋಗ್ ಸ್ವಾಗತಿಸಿದರು. ಯೋಗೀಶ್ ದೇವಾಡಿಗ ಪ್ರಸ್ತಾವನೆಗೈದರು. ಪ್ರವೀಣ್ ಬಾಳೆಕೊಡ್ಲು ವಂದಿಸಿದರು. ಡಾ.ಗಂಗಾಧರ ಆರ್.ಎಚ್ ಕಾರ್ಯಕ್ರಮ ನಿರೂಪಿಸಿದರು. ಚೈತ್ರ ಪಿ.ಶೆಟ್ಟಿ ಸಹಕರಿಸಿದರು.