More

    ಕಾಲುಗಳಿಗೆ ಶಕ್ತಿ ನೀಡುವ ಸರಳ ಯೋಗಾಸನವಿದು; ಎಲ್ಲರೂ ಮಾಡಬಹುದು!

    ಕಾಲುಗಳಿಗೆ, ತೊಡೆಗಳಿಗೆ ಹೆಚ್ಚು ಶಕ್ತಿಯನ್ನು ಕೊಡುವಂತಹ ಸರಳ ಯೋಗಾಸನವೆಂದರೆ ಉತ್ಥಿತ ಏಕಪಾದಾಸನ. ಈ ಆಸನವನ್ನು ಅಂಗಾತವಾಗಿ ಮಲಗಿಕೊಂಡು 60 ಡಿಗ್ರಿ ಕೋನದವರೆಗೆ ಒಂದೊಂದೇ ಕಾಲನ್ನು ಮೇಲಕ್ಕೆತ್ತಿ ಮಾಡಲಾಗುತ್ತದೆ. ಇದು ಕಾಲಿನ ಸಮತೋಲನ ಸಾಧಿಸುವ ಆಸನವಾಗಿದ್ದು, ನಿಯಮಿತ ಅಭ್ಯಾಸದಿಂದ ತೊಡೆಗಳ ಹಾಗೂ ಸೊಂಟದ ಬೊಜ್ಜು ಕರಗಿಸಲು ಸಹಾಯವಾಗುತ್ತದೆ.

    ಅಧಿಕ ತೂಕದ ವ್ಯಕ್ತಿಗಳಿಗೆ ಆರಂಭದಲ್ಲಿ ತುಂಬಾ ಹೊತ್ತು ನಿಂತು ಮಾಡುವ ಆಸನಗಳನ್ನು ಅಭ್ಯಾಸ ಮಾಡಲು ಕಷ್ಟವಾಗುತ್ತದೆ. ಮಲಗಿಕೊಂಡು ಒಂದೊಂದು ಕಾಲನ್ನು ಎತ್ತಿ ಕೆಳಗಿಸುವ ಉತ್ಥಿತ ಏಕಪಾದಾಸನ ಮಾಡಲು ಸುಲಭವಾಗುತ್ತದೆ. ಈ ಆಸನವನ್ನು ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಮಾಡಬಹುದು.

    ಇದನ್ನೂ ಓದಿ: ಆರ್​ಟಿಒ ಸಿಬ್ಬಂದಿಯ ವಸೂಲಿ ದಂಧೆ ಹೇಗಿರುತ್ತೆ ಗೊತ್ತಾ? ವಿಡಿಯೋ ವೈರಲ್​

    ಉಪಯೋಗಗಳು: ಕೆಳಬೆನ್ನು ಮತ್ತು ಕಾಲುಗಳ ಸ್ನಾಯುಗಳನ್ನು ಬಲಪಡಿಸುತ್ತದೆ, ಕಾಲುಗಳಿಗೆ ಹೆಚ್ಚು ಶಕ್ತಿ ಒದಗಿ ಬರುತ್ತದೆ. ಮಂಡಿನೋವು ನಿಯಂತ್ರಣವಾಗುತ್ತದೆ. ಪಿತ್ತಜನಕಾಂಗ ಮತ್ತು ಮೂತ್ರಕೋಶಗಳ ಕಾರ‍್ಯ ಸಮರ್ಪಕವಾಗಿ ನಿರ್ವಹಿಸುವುದಲ್ಲದೆ ಬೆನ್ನು ನೋವು ಮತ್ತು ಸೊಂಟ ನೋವು ನಿಯಂತ್ರಣಕ್ಕೆ ಈ ಆಸನವು ಸಹಕಾರಿಯಾಗಿದೆ.

    ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಅಂಗಾತವಾಗಿ ನೇರವಾಗಿ ಮಲಗಬೇಕು. ಕಾಲುಗಳನ್ನು ಜೋಡಿಸಿ, ಕೈಗಳನ್ನು ದೇಹಕ್ಕೆ ತಾಗಿಸಿ ಅಂಗೈಗಳನ್ನು ನೆಲದ ಮೇಲೆ ಇಡಬೇಕು. ಅನಂತರ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಬಲಗಾಲನ್ನು 60 ಡಿಗ್ರಿಯಷ್ಟು ಕೋನ ಮೂಡುವಷ್ಟು ಎತ್ತಿ ಮೇಲೆ ನಿಲ್ಲಿಸಬೇಕು. ಒಂದು ಅಥವಾ ಎರಡು ಬಾರಿ ಸಹಜ ಉಸಿರಾಟ ನಡೆಸಿ, ಅನಂತರ ಉಸಿರನ್ನು ಬಿಡುತ್ತಾ ಕಾಲನ್ನು ನಿಧಾನವಾಗಿ ನೆಲದ ಮೇಲೆ ಇಡಬೇಕು. ಇದೇ ರೀತಿ ಎಡಗಾಲಿನಲ್ಲಿಯೂ ಅಭ್ಯಸಿಸಬೇಕು. ಇದೇ ರೀತಿ ಮೂರು ಬಾರಿ ಅಭ್ಯಾಸ ನಡೆಸಿರಿ. ಕೊನೆಗೆ ಕಾಲುಗಳನ್ನು ವಿಸ್ತರಿಸಿ ವಿಶ್ರಾಂತಿ ಪಡೆಯಿರಿ.

    ಸಾಮಾನ್ಯವಾಗಿ ಎಲ್ಲಾ ಸಮಸ್ಯೆ ಇದ್ದವರೂ ಈ ಆಸನವನ್ನು ಸುಲಭವಾಗಿ ಮಾಡಬಹುದು.

    ನರಗಳ – ಮನಸ್ಸಿನ ನಿಯಂತ್ರಣ ಸಾಧಿಸಲು, ಈ ಯೋಗಾಸನ ಸಹಕಾರಿ

    ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ರೇಪ್​ ಮಾಡಿದ ಕ್ಯಾಬ್​ ಡ್ರೈವರ್; ಮದ್ಯಪಾನವೇ ಮುಳುವಾಯ್ತಾ?

    ಭಾರತದ ಇನ್ನೆರಡು ಬೀಚ್​​ಗಳಿಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್​ ಮಾನ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts