More

    ಜಿರಾಫೆ ಹೇಗೆ ಹುಲ್ಲು ತಿನ್ನತ್ತೆ? ಇದೆಂತಾ ಪ್ರಶ್ನೆ ಎಂದು ಅಸಡ್ಡೆ ಮಾಡ್ಬೇಡಿ..ಈ ವಿಡಿಯೋ ನೋಡಿದ್ರೆ ಅಚ್ಚರಿ ಪಡ್ತೀರಿ !

    ಜಿರಾಫೆ ಹೇಗೆ ಹುಲ್ಲು ತಿನ್ನುತ್ತದೆ? ತನ್ನ ಉದ್ದನೆಯ ಕತ್ತನ್ನು ಇನ್ನಷ್ಟು ಉದ್ದ ಮಾಡಿ ಮರದ ಎಲೆಗಳನ್ನು ತಿನ್ನುವುದು ಗೊತ್ತು..ಆದರೆ ಮುಂದಿನ ಉದ್ದನೆ ಕಾಲುಗಳನ್ನಿಟ್ಟುಕೊಂಡು, ಕತ್ತು ಬಗ್ಗಿಸಿ ಹೇಗೆ ಹುಲ್ಲು ತಿನ್ನುತ್ತದೆ..ಎಂಬುದನ್ನು ನೋಡಲು ಈ ವಿಡಿಯೋ ನೋಡಲೇ ಬೇಕು..

    ಜಿರಾಫೆಯೊಂದು ಹುಲ್ಲು ತಿನ್ನುವ ವಿಡಿಯೋ ಸಿಕ್ಕಾಪಟೆ ವೈರಲ್​ ಆಗಿದ್ದು, ಅದನ್ನು ನೋಡಿದರೆ ನಿಮಗೂ ನಗು ಬಾರದೆ ಇರದು ! ಇದನ್ನೂ ಓದಿ: VIDEO| ವಾರದೊಳಗೆ 1 ಕೋಟಿಗೂ ಅಧಿಕ ವೀಕ್ಷಣೆ: ಹೈಸ್ಕೂಲ್​ ವಿದ್ಯಾರ್ಥಿನಿಯ ಅಚ್ಚರಿಯ ವಿಡಿಯೋ!

    ಏಳು ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ತನ್ನ ಮುಂದಿನ ಎರಡೂ ಕಾಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಬಾಗಿಸಿ, ಕತ್ತು ಬಗ್ಗಿಸಿ ಹುಲ್ಲು ತಿನ್ನುವುದನ್ನು ನೋಡಬಹುದು. ಥೇಟ್ ನಾವು ವರ್ಕೌಟ್​ ಮಾಡಿದಂತೆ ಕಾಣುವ ವಿಡಿಯೋ ಸದ್ಯ ಇಂಟರ್​ನೆಟ್​ನಲ್ಲಿ ಆಕರ್ಷಣೆಯ ಕೇಂದ್ರವಾಗಿದೆ. ಎರಡೂ ಕಾಲನ್ನೂ ಥಟ್​ ಎಂದು ವಿರುದ್ಧ ದಿಕ್ಕಿನಲ್ಲಿ ಬಾಗಿಸಿ..ಮತ್ತೆ ಸಾವಧಾನ್​ ಸ್ಥಿತಿಯಲ್ಲಿ ನಿಲ್ಲುತ್ತದೆ. ಹೀಗೆ ಎರಡು ಮೂರು ಬಾರಿ ಮಾಡುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

    ಐಎಫ್​ಎಸ್​ ಅಧಿಕಾರಿ ಸುಧಾ ರಾಮನ್​ ಎಂಬುವರು ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅನೇಕರು ಇದನ್ನು ಶೇರ್ ಮಾಡಿಕೊಂಡಿದ್ದಾರೆ.  ನೆಟ್ಟಿಗರಂತೂ ತಮಗೆ ತೋಚಿದ ಕಾಮೆಂಟ್​ಗಳನ್ನು ಬರೆದಿದ್ದಾರೆ. ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts