

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಶಾಲೆಗೆ ಇನ್ನಷ್ಟು ಮೂಲಸೌಕರ್ಯಗಳ ಅವಶ್ಯಕತೆಯಿದೆ. ಗ್ರಾಮೀಣ ಪ್ರದೇಶವಾದ ಈ ಭಾಗಕ್ಕೆ ಕೆಪಿಎಸ್ ಪದವಿಪೂರ್ವ ಮತ್ತು ಪದವಿ ಶಿಕ್ಷಣ ವ್ಯವಸ್ಥೆಯ ಅಗತ್ಯ ಎಂದು ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉದ್ಯಮಿ ರಿನಿತ್ ರೈ ಕರ್ನೂರು ಧ್ವಜಾರೋಹಣ ನೆರವೇರಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಉದ್ಘಾಟಿಸಿದರು. ಶಾಲಾ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ಕರ್ನೂರು ಗುತ್ತು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ವೆಂಕಪ್ಪ ನಾಯ್ಕ, ಇಬ್ರಾಹಿಂ ಪಳ್ಳತ್ತೂರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಸದಾಶಿವ ರೈ ನಡುಬೈಲು, ಸೂಫಿ ಬಾಂಟಡ್ಕ, ಮಹಾಬಲ ರೈ ಕರ್ನೂರು, ಮೊಹಮ್ಮದ್ ಪಳ್ಳತ್ತೂರು. ಫೌಝಿಯಾ, ದೇವಕಿ, ನಾರಾಯಣ್ ನಾಯ್ಕ, ಶಶಿಕಲಾ ಮಾಧವ ಅಡ್ಡಂತಡ್ಕ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಿಥುನ್ ರಾಜ್, ಶಾರದಾ ಶುಭ ಹಾರೈಸಿದರು.
ಮುಖ್ಯಶಿಕ್ಷಕ ಪ್ರೇಮ್‌ಕುಮಾರ್ ವರದಿ ವಾಚಿಸಿದರು. ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕಿಯರಾದ ದಮಯಂತಿ, ಮೋನಿಷಾ, ಮಾಲಿನಿ, ಮೀನಾಕ್ಷಿ ವಾಚಿಸಿದರು. ಶಿಕ್ಷಕರಾದ ಇಂದಿರಾ ಸ್ವಾಗತಿಸಿದರು. ಪುರುಷೋತ್ತಮ ಬಿ. ವಂದಿಸಿದರು. ದೇವಿಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.