ಪ್ರೊ. ಗಾಡೀಳ್ ಸಮಿತಿ ವರದಿ ಅನುಷ್ಠಾನಕ್ಕೆ ವಿಶಾಲಾಕ್ಷಿ ಒತ್ತಾಯ; ವಯನಾಡು ಕೃತಿ ಬಿಡುಗಡೆ

vayanadu
Published on

ಬೆಂಗಳೂರು: ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವ ಅರಿತು ಪರಿಸರ ರಕ್ಷಣೆಗಾಗಿ ಪ್ರೊ.ಮಾಧವ ಗಾಡೀಳ್ ಸಮಿತಿಯ ವರದಿ ಅನುಷ್ಠಾನಗೊಳಿಸಿ ಎಂದು ಪರಿಸರ ತಜ್ಞೆ ವಿಶಾಲಕ್ಷಿ ಒತ್ತಾಯಿಸಿದ್ದಾರೆ.

ಶುಕ್ರವಾರ ಕನ್ನಡ ಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಕಥನ ಕರ್ನಾಟಕ ಬೆಂಗಳೂರು ಏರ್ಪಡಿಸಿದ್ದ ಪತ್ರಕರ್ತ ಆಶಿಕ್ ಮುಲ್ಕಿ ರಚಿಸಿರುವ ‘ವಯನಾಡು ಸಾವು ಬಂದ ಹೊತ್ತಿಗೆ ಹೇಳದೆ ಉಳಿದ ಸತ್ಯಗಳು’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವಯನಾಡಿನಲ್ಲಿ ಗುಡ್ಡಗಳು ಕುಸಿದು ರಾತ್ರಿ ಬೆಳಗಾಗುವುದರೊಳಗೆ ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿ ನಷ್ಟವಾಯಿತು. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಭೂ ಕುಸಿತಗಳಾಗಿವೆ. ಇದಕ್ಕೆ ಕಾರಣ ಪ್ರಕೃತಿಯ ಮೇಲೆ ಮಾನವನ ದಬ್ಬಾಳಿಕೆ, ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್, ಹೋಂ ಸ್ಟೇ, ಹೋಟೆಲ್‌ಗಳ ನಿರ್ಮಾಣ. ಪರಿಸರಕ್ಕೆ ವಿಪರೀತ ಹಾನಿ ಉಂಟುಮಾಡುವ ಇಂತಹ ಮಾರಕ ಚಟುವಟಿಕೆಗಳನ್ನು ತಡೆಗಟ್ಟಲು ಸರಕಾರ ಯಾವುದೇ ಗಂಭೀರ ಪ್ರಯತ್ನವನ್ನೂ ಮಾಡಿಲ್ಲ. ದುರಂತ ಸಂಭವಿಸಿದ ಬಳಿಕ ಪರಿಹಾರ ನೀಡಿದರೆ ಜವಾಬ್ದಾರಿ ಮುಗಿಯಿತೆಂಬ ಭಾವನೆ ಸರಕಾರಗಳಲ್ಲಿದೆ. ಆದರೆ, ಸರಕಾರ ಕೂಡಲೇ ಪರಿಸರ ರಕ್ಷಣೆಗಾಗಿ ಮಾಧವ್ ಗಾಡೀಳ್ ವರದಿ ಜಾರಿಗೊಳಿಸಲಿ ಎಂದು ವಿಶಾಲಾಕ್ಷಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಆಶಿಕ್ ಮುಲ್ಕಿ, ವಯನಾಡು ದುರಂತದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಸಾಹುಕಾರ್ ಅಚ್ಚು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net