More

  ಹುಟ್ಟಿದ ದಿನದಂದು ಗಿಡನಾಟಿ

  ಕೊಕ್ಕರ್ಣೆ: ಮಕ್ಕಳು ತಮ್ಮ ಹುಟ್ಟಿದ ದಿನದಂದು ಕೇಕ್ ಕತ್ತರಿಸಿ ಜನ್ಮದಿನಾಚರಣೆ ಆಚರಿಸುವ ಬದಲು, ಒಂದು ಗಿಡ ನಾಟಿ ಮಾಡಿ ಆಚರಿಸಬೇಕು ಎಂದು ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ರಮೇಶ್ ಪಿ.ಕೆ. ಅಭಿಪ್ರಾಯಪಟ್ಟರು.

  ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬ್ರಹ್ಮಾವರ ವತಿಯಿಂದ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಜಯಂತ್ ಪೂಜಾರಿ, ಎಸ್‌ಡಿಎಂಸಿ ಉಪಾಧ್ಯಕ್ಷ ಉದಯ್ ನಾಯ್ಕ, ಮುಖ್ಯ ಶಿಕ್ಷಕಿ ಇಂದಿರಾ, ಪ್ರವೀಣ್, ಶೌರ್ಯ ಘಟಕ ಪ್ರತಿನಿಧಿ ಜೀವನ್ ಪೂಜಾರಿ ಬೈದೆಬೆಟ್ಟು ಉಪಸ್ಥಿತರಿದ್ದರು. ಮೇಲ್ವಿಚಾರಕ ಗಣೇಶ್ ಗಣೇಶ್ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಯಶೋದಾ ವಂದಿಸಿದರು.

  See also  ಕರಿಮಣಿ ಮರಳಿ ಸಿಕ್ಕಿದ್ದಕ್ಕೆ ಪೂಜೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts