

ಕಡಬ: ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಶಾಲಾ ಪರಿಸರ ಸ್ವಚ್ಛತೆ ಮತ್ತು ತರಕಾರಿ ಕೈತೋಟ ರಚನೆಯನ್ನು ಶ್ರಮದಾನದ ಮೂಲಕ ನಡೆಸಲಾಯಿತು. 12 ಜನ ಶೌರ್ಯ ವಿಪತ್ತು ಘಟಕ ಸದಸ್ಯರು ಭಾಗವಹಿಸಿದ್ದರು. ಸದಸ್ಯರಿಗೆ ಶಾಲಾ ವತಿಯಿಂದ ಭಗವದ್ಗೀತೆ ಪುಸ್ತಕ ನೀಡಿ ಗೌರವಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖರಾದ ಸುಜಾತ, ಸಂಯೋಜಕರಾದ ಸವಿತಾ ಮತ್ತು ಕೇಶವ ಪಲ್ಲತಡ್ಕ, ಆಡಳಿತ ಮಂಡಳಿ ಕೋಶಾಧ್ಯಕ್ಷ ರಾಮಚಂದ್ರ ಭಟ್ ಅತ್ರಿವನ, ಮುಖ್ಯಶಿಕ್ಷಕಿ ಆಶಾ.ಎಸ್.ರೈ, ಶಿಕ್ಷಕರು ಉಪಸ್ಥಿತರಿದ್ದರು.