More

    ಸದಾ ಕುಡಿದು ಬಂದು ಹಿಂಸಿಸುತ್ತಿದ್ದ ಪತಿಗೆ ಲಟ್ಟಣಿಗೆಯಲ್ಲೇ ಹೊಡೆದು ಕೊಂದ ಪತ್ನಿ

    ನೊಯ್ಡಾ: ಸದಾ ಹಿಂಸೆ ನೀಡುತ್ತಿದ್ದ ಗಂಡ ಜೀವವನ್ನೇ ತೆಗೆದುಬಿಟ್ಟಿದ್ದಾಳೆ ಈ ಮಹಿಳೆ.
    ನೊಯ್ಡಾದ ಜೆಜೆ ಕಾಲನಿಯಲ್ಲಿ ಈ ಗುಡಿಯಾ (30) ಮತ್ತು ಚುನ್ನು (32) ಎಂಬ ದಂಪತಿ ವಾಸವಾಗಿದ್ದರು. ಮೂಲತಃ ಬಿಹಾರದ ಪಟನಾ ಜಿಲ್ಲೆಯವರಾಗಿದ್ದು, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

    ಚುನ್ನು ತುಂಬ ಕುಡಿಯುತ್ತಿದ್ದ. ಕುಡಿದು ಬಂದು ಗುಡಿಯಾಗೆ ಹೊಡೆದು, ಹಿಂಸೆ ನೀಡುತ್ತಿದ್ದ. ಹೀಗೆ ಜೂನ್​ 25ರಂದು ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ ಪತಿಗೆ ಗುಡಿಯಾ ಲಟ್ಟಣಿಗೆಯಲ್ಲೇ ಹೊಡೆದು, ಕತ್ತು ಹಿಸುಕಿ ಕೊಂದಿದ್ದಾಳೆ.

    ಚುನ್ನು ಮೃತದೇಹ ಜೂ.26ರಂದು ಅವರ ಮನೆಯ ಬಳಿಯ ರಸ್ತೆಯಲ್ಲಿ ಸಿಕ್ಕಿದೆ. ಚುನ್ನುವಿನ ಸಂಬಂಧಿಯೋರ್ವರು ನೀಡಿದ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಈ ಎಲ್ಲ ವಿಚಾರಗಳನ್ನೂ ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ನಾಯಿ ಮರಿಯನ್ನು ಹೊತ್ತೊಯ್ಯುತ್ತಿದ್ದ ಚಿರತೆ ಮೇಲೆ ಬೀದಿ ನಾಯಿಗಳ ದಾಳಿ; ಮರಿ ಬಿಟ್ಟು ಓಡಿದ ಚಿರತೆ

    ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಆಕೆಯೂ ಕೂಡ ತಾನು ಮಾಡಿದ ಹತ್ಯೆಯ ಬಗ್ಗೆ ಒಪ್ಪಿಕೊಂಡಿದ್ದಾರೆ. ಪತಿಯ ಕುಡಿತ ಮತ್ತು ದೌರ್ಜನ್ಯದಿಂದ ಬೇಸತ್ತಿದ್ದೆ. ಒಂದು ಕಡೆ ವಾಸಿಸಲು ಸಾಧ್ಯವಾಗುತ್ತಿರಲಿಲ್ಲ. ಅವನ ವರ್ತನೆಯಿಂದ ಮನೆ ಮಾಲೀಕರು ಪದೇಪದೆ ನಮ್ಮನ್ನು ಹೊರಗಟ್ಟುತ್ತಿದ್ದರು. ಸಹಿಸಿ ಸಾಕಾಗಿ ಆತನನ್ನು ಹತ್ಯೆ ಮಾಡಿದೆ ಎಂದು ಗುಡಿಯಾ ಪೊಲೀಸರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)

    ನಿತ್ಯಾನಂದನ ಅಹ್ಮದಾಬಾದ್​ ಆಶ್ರಮದಿಂದ ನಾಪತ್ತೆಯಾದ ಯುವತಿಯರು ಕೈಲಾಸದಲ್ಲಿ; ಗುರುವಿನೊಟ್ಟಿಗೆ ಸಂಗೀತಾಭ್ಯಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts