ರಾಷ್ಟ್ರ ಹಾಗೂ ಜೀವನ ನಿರ್ಮಾಣಕ್ಕೆ ಎನ್ನೆಸ್ಸೆಸ್ ಸಹಕಾರಿ, ಶ್ರೀ ರಾಮಕೃಷ್ಣ ಕಾಲೇಜಿನ ಎನ್ನೆಸ್ಸೆಸ್ ಯೋಜನಾ ಘಟಕ ಉದ್ಘಾಟಿಸಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ.

mng_15 oct ramakrishna NSS
ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಚಟುವಟಿಕೆ ಇತ್ತೀಚೆಗೆ ಉದ್ಘಾಟನೆಗೊಂಡಿತು. ವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ., ಎನ್ನೆಸ್ಸೆಸ್ ಯೋಜನಾಧಿಕಾರಿ ಸೌಮ್ಯ ಸಹಿತ ಹಲವರಿದ್ದರು.
Published on

ಮಂಗಳೂರು: ಸೇವೆಗೆ ವೈಭವವಿಲ್ಲ, ರಾಷ್ಟ್ರ ಹಾಗೂ ಜೀವನ ನಿರ್ಮಾಣಕ್ಕೆ ಎನ್ನೆಸ್ಸೆಸ್ ಸಹಕಾರಿ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ಹೇಳಿದರು.

ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.

ಯುವಮನಸ್ಸುಗಳು ದೇಶದ ಬೆನ್ನೆಲುಬಾಗಿ ನಿಸ್ವಾರ್ಥ ಸೇವೆ ಮತ್ತು ಶ್ರದ್ದೆ ಇದ್ದಲ್ಲಿ ಜೀವನದಲ್ಲಿ ಉನ್ನತ ಮಟ್ಟ ತಲುಪಲು ಸಾಧ್ಯ. ಕನಿಷ್ಠ ವ್ಯವಸ್ಥೆಯಲ್ಲಿ ಬದುಕಿನ ಪಾಠ ಮತ್ತು ಉತ್ತಮ ಮನುಷ್ಯ ಸಂಬಂಧ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಬಹು ದೊಡ್ಡದು. ನನಗಲ್ಲ ನಿನಗೆ ಎಂಬ ದ್ಯೇಯ ವಾಕ್ಯದೊಂದಿಗೆ ಅವರಲ್ಲಿ ಸಂವಹನ ಕೌಶಲ ಬೆಳೆಸುವುದರ ಜೊತೆಗೆ ಸದಾ ಚಟುವಟಿಕೆಯಿಂದಿರಲು ಎನ್ನೆಸ್ಸೆಸ್ ಪೂರಕ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ಮಾತನಾಡಿ, ವಿದ್ಯಾರ್ಥಿ ಜೀವನವು ಜ್ಞಾನದ ಸಂಕೇತ. ಜ್ಞಾನದ ಜೊತೆಗೆ ಇತರ ಸೇವಾ ಚಟುವಟಿಕೆಗಳು ಮುಂದಿನ ಸಾಮಾಜಿಕ ಜೀವನದಲ್ಲಿ ಉಪಯೋಗಕ್ಕೆ ಬರುತ್ತವೆ. ಎಂದರು.

ಉಪಪ್ರಾಂಶುಪಾಲರಾದ ಪ್ರತಿಮಾ ಎ ಶೆಟ್ಟಿ, ಯೋಜನಾ ಕಾರ್ಯದರ್ಶಿಗಳಾದ ಚೇತನ್, ಯೋಗಿತ ಶೆಟ್ಟಿಗಾರ್, ಹರ್ಷ, ಶ್ರಾವ್ಯ ಎಂ ಶೆಟ್ಟಿ ಮತ್ತು ಸಂಯೋಜಕರಾದ ದೀಕ್ಷಾ, ಸಚಿನ್ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಸೌಮ್ಯ ಸ್ವಾಗತಿಸಿದರು. ಉಪನ್ಯಾಸಕಿ ಸಮಿತಾ ಅತಿಥಿಗಳನ್ನು ಪರಿಚಯಿಸಿದರು. ಯೋಜನಾಧಿಕಾರಿ ಸುಮನಾ ರೈ ಪ್ರಮಾಣವಚನ ಬೋಧಿಸಿದರು. ಯೋಗಿತ ವಂದಿಸಿದರು. ಉಪನ್ಯಾಸಕ ನಟೇಶ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net