

ಮುಳ್ಳೇರಿಯ: ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಮಾಧವ ತೆಕ್ಕೆಕೆರೆ ಬರೆದ ‘ರೇಡಿಯೋ ದಾಟ್ ಡಿಸ್ಪೈಡ್ ಪಿಕ್ಚರ್ಸ್’ ಕಿರು ಕಾದಂಬರಿಯನ್ನು ಕಾಸರಗೋಡು ಸರ್ಕಾರಿ ಕಾಲೇಜಿನ ಇಂಗ್ಲಿಷ್ ವಿಭಾಗದ ನಿವೃತ್ತ ಮುಖ್ಯಸ್ಥ, ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಪ್ರೊ.ಶ್ರೀಶ ದೇವ ಪೂಜಿತ್ತಾಯರು ಬಿಡುಗಡೆಗೊಳಿಸಿದರು.
ಕೃತಿಯ ಮೊದಲ ಪ್ರತಿ ಇರಿಯಣ್ಣಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಅಬ್ದುಲ್ ಸಲಾಂ ಎಂ.ಎ ಸ್ವೀಕರಿಸಿದರು. ಸೆಂಟ್ರಲ್ ಎಕ್ಸೈಸ್ ನಿವೃತ್ತ ಕಮಿಷನರ್ ಆಚಾರ್ಯ ಡಾ.ಕೆ.ಕೆ.ಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದ್ದರು.
ಸಿನಿಮಾ ನಿರ್ಮಾಪಕ ಭರತ್ ರಾಜ್ ಉಳಿಯತ್ತಡ್ಕ, ಮುಳ್ಳೇರಿಯ ಸರ್ಕಾರಿ ಶಾಲಾ ಶಿಕ್ಷಕಿ ರೆಜಿತಾ ಮಾಧವ್, ಸಾಹಿತಿ ಲಕ್ಷ್ಮಣ ಶಾಸ್ತಾಂಗೋಡು, ನಿವೃತ್ತ ಶಿಕ್ಷಕಿ ಡಾ. ಗಂಗಾದೇವಿ ಶುಭ ಹಾರೈಸಿದರು. ಪರವನಡ್ಕ ಸರ್ಕಾರಿ ಶಾಲಾ ಶಿಕ್ಷಕ ಮೊಹಮ್ಮದ್ ಫೈಸಲ್ ಸ್ವಾಗತಿಸಿ, ಕೃತಿಕಾರ ಮಾಧವ ತೆಕ್ಕೆಕೆರೆ ವಂದಿಸಿದರು.