ದಿ.ರಾಜೀವಿ ಭಂಡಾರಿ ಸ್ಮರಣಾರ್ಥ ದತ್ತಿನಿಧಿ ಪುರಸ್ಕಾರ

New Project (12)
Published on

ಬಂಟ್ವಾಳ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಪತ್ನಿ ದಿ.ರಾಜೀವಿ ಭಂಡಾರಿ ಸ್ಮರಣಾರ್ಥ ನೀಡುವ ದತ್ತಿನಿಧಿ ನಗದು ಪುರಸ್ಕಾರವನ್ನು ಸಾಧಕ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ವಿದ್ಯಾರ್ಥಿಗಳಾದ ಪೂರ್ವಿಕಾ ಕುಲಾಲ್, ಮಹಮ್ಮದ್ ಬಿಲಾಲ್, ಭವಿತ್ ಎಲ್.ಪೂಜಾರಿ ಹಾಗೂ ಅಶುರ ಅವರಿಗೆ ನೀಡಲಾಯಿತು. ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯ್ಕ ಅವರ ದತ್ತಿ ನಿಧಿಯ ಬಡ್ಡಿ ಹಣದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ವಿಷಯವಾರು ಅತ್ಯಧಿಕ ಅಂಕ ಗಳಿಸಿದ ಪ್ರಥಮ ಹಾಗೂ ದ್ವಿತೀಯ ಸ್ಥಾನಿಗಳನ್ನು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ, ಸದಸ್ಯರಾದ ರವಿ ಪಂಬದ, ದಾಮೋದರ ಮಡಿವಾಳಪಡ್ಪು, ನಳಿನಾಕ್ಷಿ, ಎಸ್‌ಡಿಎಂಸಿ ನಿಕಟಪೂರ್ವ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಪೆರ್ವ, ದತ್ತಿನಿಧಿ ಸ್ಥಾಪಕರಾದ ಎ.ಸಿ.ಭಂಡಾರಿ, ಅಕ್ಷಣ್ ಭಂಡಾರಿ, ಗ್ರಾ.ಪಂ. ಸದಸ್ಯ ವಿಶ್ವನಾಥ ಬೆಳ್ಚಾಡ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಶರ್ಮಿಳಾ ಶೆಣೈ ಬಹುಮಾನಿತರ ಪಟ್ಟಿ ವಾಚಿಸಿದರು. ಸಹಶಿಕ್ಷಕ ವೆಂಕಟ್ರಮಣ ಆಚಾರ್ಯ ನಿರೂಪಿಸಿದರು. ಶಿಕ್ಷಕಿ ಸುಲೋಚನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net