ಸರ್ಕಾರಿ ಶಾಲೆ ಬೆಳವಣಿಗೆಗೆ ಒತ್ತು

thenka
Published on

ಬೈಂದೂರು: ಸರ್ಕಾರಿ ಶಾಲೆ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಬೈಂದೂರು ವಲಯದ ತೆಂಕಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದ ಬಿ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಸದಾಶಿವ ಶ್ಯಾನುಭಾಗ್ ಉದ್ಘಾಟಿಸಿದರು. ಕಂಬದಕೋಣೆ ಗ್ರಾಪಂ ಮಾಜಿ ಅಧ್ಯಕ್ಷ ಸುಕೇಶ್ ಕುಮಾರ್ ಶೆಟ್ಟಿ, ಸದಸ್ಯ ಸುಬ್ರಹ್ಮಣ್ಯ ಜೋಗಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಗಿರಿಜಾ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಸುಧಾರಾಜ್, ಶುಭಾಶ್ಚಂದ್ರ ಶೆಟ್ಟಿ, ವಸಂತ್ ಜೋಗಿ, ರವಿರಾಜ್ ಹೆಗ್ಡೆ, ಚೆರ್ಕಾಡಿ, ಇಲಿಯಾಸ್ ಎಂ.ಜಿ., ಮಂಜುನಾಥ ಭಟ್ ಉಪ್ರಳ್ಳಿ, ಮಂಜುನಾಥ ಬಿ., ಹಳಗೇರಿ, ಸಿಆರ್‌ಪಿ ರಾಮನಾಥ ಮೇಸ್ತ ಇದ್ದರು. ಮುಖ್ಯ ಶಿಕ್ಷಕಿ ಶ್ಯಾಮಲಾ ಕೆ. ಸ್ವಾಗತಿಸಿ, ಸಹಶಿಕ್ಷಕಿ ವಿನುತಾ ನಿರೂಪಿಸಿದರು.

ಬಹುಮಾನ ವಿತರಣೆ, ಸನ್ಮಾನ

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ರಮೇಶ್ ಎಚ್.ಎಸ್.ಜೋಗಿ, ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಅಧ್ಯಕ್ಷ ಅಬ್ದುಲ್ ಸಲಾಂ, ಎಂಎಂಎಸ್ ಮುಖ್ಯಸ್ಥ ಡಾ.ಪ್ರದೀಪ್ ಗಾಣಿಗ, ಶಿಕ್ಷಕಿಯರಾದ ಸುಜಾತಾ ಭಟ್, ಪ್ರಮೀಳಾ, ಉಮಾ ಬಿ.ಎನ್., ಗೌರವ ಶಿಕ್ಷಕ ಸುರೇಶ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net