ಎಮ್ಮೆಕೆರೆ ಈಜುಕೊಳದಲ್ಲಿ ರಾಷ್ಟ್ರ ಮಟ್ಟದ ಈಜುಪಟುಗಳಿಗೆ ಉಚಿತ ಪ್ರವೇಶ ನೀಡಲು ಒತ್ತಾಯ

mng-11june-swim
Published on


ಮಂಗಳೂರು : ನಗರದ ಎಮ್ಮೆಕೆರೆ ಈಜುಕೊಳದಲ್ಲಿ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿದ ಈಜುಪಟುಗಳಿಗೆ ಮತ್ತು ಅವರ ಕೋಚ್‌ಗಳಿಗೆ ಉಚಿತ ಪ್ರವೇಶ ನೀಡಬೇಕೆಂದು ಎಂಎಲ್‌ಸಿ ಐವನ್ ಡಿಸೋಜಾ ನೇತ್ರತ್ವದ ನಿಯೋಗ ಬುಧವಾರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಒತ್ತಾಯಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಸುಮಾರು 50 ಕೋಟಿ ರೂ. ಖರ್ಚು ಮಾಡಿ ಸುಸಜ್ಜಿತವಾದ ಈಜುಕೊಳ ನಿರ್ಮಿಸಲಾಗಿದೆ. ಇಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳಿಗೆ ಉಚಿತವಾಗಿ ಅಭ್ಯಾಸ ನಡೆಸಲು ಅವಕಾಶ ನೀಡಬೇಕೆಂದು ಅನೇಕ ಕ್ರೀಡಾ ಸಂಸ್ಥೆಗಳು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಆದರೆ ಈ ಬಗ್ಗೆ ಚರ್ಚೆಗಳು ನಡೆದರೂ ಇನ್ನೂ
ಕಾರ್ಯಗತವಾಗಿಲ್ಲ . ಈಜುಕೊಳದ ಮೂಲ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಅದನ್ನು ವ್ಯಾಪಾರೀಕರಣ ಮಾಡುವ ಕೃತ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿ ಅವರು ತಕ್ಷಣ ಸಭೆ ಕರೆದು ಅರ್ಹರಿಗೆ ಉಚಿತ ಪ್ರವೇಶ ನೀಡಬೇಕೆಂದು ಐವನ್ ಡಿಸೋಜಾ
ಒತ್ತಾಯಿಸಿದರು.
ದ.ಕ. ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಅಧ್ಯಕ್ಷ ಯತೀಶ್ ಬೈಕಂಪಾಡಿ,ಕಾರ್ಯದರ್ಶಿ ಮಹೇಶ್ ಕುಮಾರ್ ,ಸದಸ್ಯ ಯೋಗೀಶ್
ಭಟ್ ಈಜುಪಟುಗಳ ಹೆತ್ತವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net