ಎಲಾನ್​ ಮಸ್ಕ್ ನಾಯಿ ಫ್ಲೋಕಿ ಟ್ವಿಟರ್ ಸಿಇಒ! ಪರೋಕ್ಷವಾಗಿ ಪರಾಗ್​ಗೆ ಟಾಂಗ್​

Twitter CEO
Published on

ನ್ಯೂಯಾರ್ಕ್: ಜಾಗತಿಕ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಉದ್ಯಮಿ ಎಲನ್ ಮಸ್ಕ್ ಕೆಲ ತಿಂಗಳ ಹಿಂದೆ ಖರೀದಿಸಿದ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್​ಗೆ ಹೊಸ ಸಿಇಒ ಆಗಿ ತಮ್ಮ ಮುದ್ದಿನ ನಾಯಿ ಫ್ಲೋಕಿಯನ್ನು ಸಿಇಒ ಕುರ್ಚಿಯಲ್ಲಿ ಕೂರಿಸಿ ತೆಗೆದ ಚಿತ್ರ ವೈರಲ್ ಆಗಿದೆ.

ಶಿಬಾ ಇನು ತಳಿಯ ಫ್ಲೋಕಿ, ಅದು ಹಿಂದಿನ ಸಿಇಒ ಪರಾಗ್ ಅಗರ್​ವಾಲ್​ಗಿಂತ ಉತ್ತಮವಾಗಿರಲಿದೆ ಎಂದು ಮಸ್ಕ್ ಪರೋಕ್ಷವಾಗಿ ಹೇಳಿ ಪರಾಗ್ ವಿರುದ್ಧದ ಅಸಹನೆಯನ್ನು ಇನ್ನೊಮ್ಮೆ ಹೊರ ಹಾಕಿದ್ದಾರೆ.

ಖ್ಯಾತ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಅನ್ನು ನೇಮಿಸುವ ಬಗ್ಗೆಯೂ ಮಸ್ಕ್ ಈ ಹಿಂದೆ ವ್ಯಂಗ್ಯವಾಗಿ ಬರೆದುಕೊಂಡಿದ್ದರು. ದುಬೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಸ್ಕ್, ಟ್ವಿಟರ್​ಗೆ ಸದ್ಯ ತಾವೇ ಸಿಇಒ ಆಗಿದ್ದು, ಈ ಹುದ್ದೆಗೆ ಈ ವರ್ಷಾಂತ್ಯದೊಳಗೆ ಬೇರೆಯವರನ್ನು ತರಲಾಗುವುದು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net