ಇನ್ನೆರೆಡು ತಿಂಗಳಲ್ಲೇ ಭಾರತಕ್ಕೆ ಸ್ಟಾರ್​ಲಿಂಕ್​ ಇಂಟರ್​ನೆಟ್! ಮಸ್ತ್ ಆಗಿದೆ 'ಮಸ್ಕ್​' ಆಫರ್​ | Starlink

ವಿಜಯವಾಣಿ (59)
Published on

Musk Starlink: ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಜೊತೆಗಿನ ವೈಮನಸ್ಸಿನ ನಡುವೆಯೂ ಭಾರತಕ್ಕೆ ಸ್ಟಾರ್‌ಲಿಂಕ್ ಅಂತರ್ಜಾಲ ಸೇವೆಯನ್ನು ತರಲು ಜನಪ್ರಿಯ ಉದ್ಯಮಿ, ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಪಣತೊಟ್ಟು ನಿಂತಿದ್ದಾರೆ.

ಎಲಾ ಮಸ್ಕ್​?

ಅತಿ ವೇಗದ ಉಪಗ್ರಹ ಇಂಟರ್​ನೆಟ್ ಸೇವೆಗಳನ್ನು ಭಾರತೀಯ ಜನರಿಗೆ ನೀಡುವ ಸಲುವಾಗಿ ತನ್ನದೇ ಸಂಸ್ಥೆಯ ಸ್ಟಾರ್‌ಲಿಂಕ್ ಅನ್ನು ಅಖಾಡಕ್ಕಿಳಿಸುತ್ತಿರುವ ಮಸ್ಕ್​, ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಉಪಗ್ರಹ ಆಧಾರಿತ (ಸ್ಟಾರ್‌ಲಿಂಕ್ ಇಂಡಿಯಾ ಪ್ರೈಸ್) ಇಂಟರ್ನೆಟ್ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲು ಎದುರುನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ, ಇದು ಇತ್ತೀಚೆಗೆ ದೂರಸಂಪರ್ಕ ಇಲಾಖೆಯಿಂದ (DoT) ಪ್ರಮುಖ ಪರವಾನಗಿಯನ್ನು ಪಡೆದುಕೊಂಡಿದೆ ಎಂಬ ಸಂಗತಿ ಗಮನಾರ್ಹ.

ಸ್ಟಾರ್‌ಲಿಂಕ್‌ಗೂ ಮೊದಲು, ದೇಶದಲ್ಲಿ ಸೇವೆಗಳನ್ನು ಪೂರೈಸಲು ಯುಟೆಲ್‌ಸ್ಯಾಟ್‌ನ ಒನ್‌ವೆಬ್ ಮತ್ತು ರಿಲಯನ್ಸ್ ಜಿಯೋ ಅನುಮತಿಗಳನ್ನು DoT ಅನುಮೋದಿಸಿದೆ. ಈ ಮಧ್ಯೆ ಅತೀ ವೇಗದ ಇಂಟರ್​ನೆಟ್ ಬಳಕೆಗೆ ಕಾತರದಿಂದ ಕಾಯುತ್ತಿರುವ ಭಾರತೀಯ ಗ್ರಾಹಕರು,​ ಸ್ಟಾರ್‌ಲಿಂಕ್ ಸರ್ವಿಸ್​ನ ದರಗಳು ಎಷ್ಟಿರಬಹುದು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅಸಲಿಗೆ ಇದು ನಿಜಕ್ಕೂ ಆಸಕ್ತಿದಾಯಕವಾಗಿದೆ.

1 ತಿಂಗಳು ಉಚಿತ ಸೇವೆ

ಸ್ಟಾರ್‌ಲಿಂಕ್ ಈಗಾಗಲೇ 100ಕ್ಕೂ ಹೆಚ್ಚು ದೇಶಗಳಿಗೆ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಪೂರೈಕೆ ಮಾಡುತ್ತಿದೆ. ಇದು ಬಾಂಗ್ಲಾದೇಶದಲ್ಲಿ ಉಪಗ್ರಹ ಡೇಟಾ ಸೇವೆಗಳನ್ನು ಸಹ ಪ್ರಾರಂಭಿಸಿದೆ. ಹಾರ್ಡ್‌ವೇರ್ ಡೇಟಾ ರಿಸೀವರ್ ಬೆಲೆ 33,000 ರೂ ಇದ್ದರೆ, ಮಾಸಿಕ ಯೋಜನೆಯ ದರಗಳು 3,000 ರೂ.ನಿಂದ ಪ್ರಾರಂಭವಾಗುತ್ತವೆ ಎಂದು ವರದಿಗಳು ಉಲ್ಲೇಖಿಸಿವೆ.

ದೂರದ ಪ್ರದೇಶಗಳಿಗೂ ಸ್ಟಾರ್‌ಲಿಂಕ್!

ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿವೆ. ಈ ಸಂಸ್ಥೆಗಳು ಉಚಿತ ಇನ್​ಸ್ಟಾಲೇಷನ್​ ಸರ್ವೀಸ್​ ಕೂಡ ನೀಡುತ್ತಿವೆ. ಕೇವಲ 1000 ರೂ.ಗೆ 100Mbps ವೇಗದ ಅನಿಯಮಿತ ಡೇಟಾವನ್ನು ಕೊಡುತ್ತಿದೆ. ಅಲ್ಲದೆ, ಒಟಿಟಿ ಮತ್ತು ಟಿವಿ ಚಾನೆಲ್​ಗಳ ಸೇವೆಯನ್ನು ಹೆಚ್ಚುವರಿಯಾಗಿ ಪಡೆಯಬಹುದಾಗಿದೆ. ಇತರೆ ಸಂಸ್ಥೆಗಳಿಗೆ ಹೋಲಿಸಿದರೆ, ಸ್ಟಾರ್‌ಲಿಂಕ್ ಬೆಲೆ ಕೊಂಚ ದುಬಾರಿಯಾಗಲಿದೆ. ಟೆಲಿಕಾಂ ಸಿಗ್ನಲ್‌ಗಳು ಲಭ್ಯವಿಲ್ಲದ ದೂರದ ಹಳ್ಳಿಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗೂ ವೇಗದ ಸ್ಟಾರ್‌ಲಿಂಕ್ ಸೇವೆಗಳು ಲಭ್ಯವಿರಲಿದೆ ಎಂಬ ಸಂಗತಿ ಹುಬ್ಬೇರಿಸುವಂತದ್ದು.

ಏಷ್ಯಾದಲ್ಲಿ ಸ್ಟಾರ್‌ಲಿಂಕ್ ವಿಸ್ತರಣೆ ವೇಗ

ಸ್ಟಾರ್‌ಲಿಂಕ್ ಪ್ರಸ್ತುತ ಜಪಾನ್, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ಭೂತಾನ್ ಮತ್ತು ಬಾಂಗ್ಲಾದೇಶದಂತಹ ಆಯ್ದ ಏಷ್ಯಾ ದೇಶಗಳಲ್ಲಿ ತನ್ನ ಡೇಟಾ ಸೇವೆಗಳನ್ನು ಒದಗಿಸುತ್ತಿದೆ. ಆದಾಗ್ಯೂ, ಮೂಲ ಯೋಜನೆಗಳು ಮಾರುಕಟ್ಟೆಯನ್ನು ಅವಲಂಬಿಸಿ 4,000 ರೂ.ನಿಂದ 6,000 ರೂ. ವರೆಗೆ ದರವನ್ನು ಹೊಂದಿದೆ. ಕಾರ್ಯಾಚರಣಾ ಪರವಾನಗಿಯನ್ನು ಪಡೆದಿದ್ದರೂ, ಭಾರತದಲ್ಲಿ ಸೇವೆಗಳನ್ನು ಪ್ರಾರಂಭಿಸುವ ಮೊದಲು ಸ್ಟಾರ್‌ಲಿಂಕ್ ಇನ್ನೂ ನಿಯಂತ್ರಕ ಅಡೆತಡೆಗಳನ್ನು ತೆರವುಗೊಳಿಸಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net