ದಿನದಲ್ಲಿ ಎಲಾನ್​ ಮಸ್ಕ್​​​ ಫೋನ್​ ಬಳಸುವ ಅವಧಿ ಎಷ್ಟು ಗೊತ್ತಾ?; ತಿಳಿದ್ರೆ ಆಶ್ಚರ್ಯವಾಗುವುದಂತೂ ಗ್ಯಾರಂಟಿ | Elon Musk

Untitled design - 2025-01-15T155653.228
Published on

ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಮೊಬೈಲ್​ ಫೋನ್​​ ನೋಡುವ ಚಟದ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ. ಗಂಟೆಗಟ್ಟಲೆ ಸ್ಕ್ರೋಲಿಂಗ್ ಮಾಡುವುದರಿಂದ ಹಸಿವು ಕಡಿಮೆಯಾಗುವುದಲ್ಲದೆ, ಅಧ್ಯಯನದಲ್ಲಿಯೂ ದುರ್ಬಲರಾಗುತ್ತಾರೆ. ನೀವು ಸಹ ಈ ಪಾಲಕರಲ್ಲಿ ಒಬ್ಬರಾಗಿದ್ದರೆ ಖಂಡಿತವಾಗಿಯೂ ನಿಮ್ಮ ಮಕ್ಕಳಿಗೆ ಎಲಾನ್​​ ಮಸ್ಕ್​(Elon Musk) ಅವರ ಉದಾಹರಣೆಯನ್ನು ನೀಡಿ.

ಸಂದರ್ಶನವೊಂದರಲ್ಲಿ ಒಂದು ದಿನದಲ್ಲಿ ಮೊಬೈಲ್​​ ಅನ್ನು ಎಷ್ಟು ಅವಧಿ ಬಳಸುತ್ತಾರೆ ಎಂಬುದನ್ನು ಎಲಾನ್​ ಮಸ್ಕ್​​ ಹೇಳಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್​ ಆಗುತ್ತಿದೆ. ಸಂದರ್ಶನದಲ್ಲಿ ಎಲಾನ್​​​​ ಮಸ್ಕ್ ಅವರು ದಿನಕ್ಕೆ ಒಂದು ನಿಮಿಷ ಮಾತ್ರ ಫೋನ್ ಬಳಸುತ್ತಾರೆ. ವಾರದಲ್ಲಿ ಒಟ್ಟು 4 ನಿಮಿಷಗಳನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ. ಅವರ ಮೊಬೈಲ್​ ಬಳಕೆಯ ಅಭ್ಯಾಸವನ್ನು ನೋಡಿದರೆ ನಿಮಗೂ ಆಶ್ಚರ್ಯವಾಗುತ್ತದೆ ಅಲ್ಲವೇ. ಆದರೆ ಅವರ ಈ ಅಭ್ಯಾಸವು ನಿಮ್ಮ ಮಗುವಿನ ಮೊಬೈಲ್​​ ಬಳಕೆಯ ಚಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಹಾಗಾದ್ರೆ ಮಕ್ಕಳಲ್ಲಿ ಮೊಬೈಲ್​ ಬಳಕೆಯ ಚಟವನ್ನು ತೊಡೆದು ಹಾಕಲು ಸಾಬೀತಾದ ಉತ್ತಮ ಮಾರ್ಗಗಳನ್ನು ಇಲ್ಲಿ ತಿಳಿಸಲಾಗಿದೆ.

ವಾರಕ್ಕೊಮ್ಮೆ ನಿಮ್ಮ ಫೋನ್ ಅನ್ನು ಬ್ಯಾನ್ ಮಾಡಿ

ಮಕ್ಕಳ ಫೋನ್​​​​ ಚಟವನ್ನು ಸುಲಭವಾಗಿ ಗುಣಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಕ್ರಮೇಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಾರದ ಯಾವುದೇ ದಿನ ವಿಶೇಷವಾಗಿ ಶನಿವಾರ ಅಥವಾ ಭಾನುವಾರದಂದು ನಿಮ್ಮ ಮಗು ಫೋನ್ ನೋಡುವುದನ್ನು ನಿಷೇಧಿಸಿ. ಈ ಯಾವುದೇ ದಿನಗಳಲ್ಲಿ ಫೋನ್ ಅನ್ನು ಪಕ್ಕಕ್ಕೆ ಇಡಲು ಮಗುಬಿಗೆ ಹೇಳಿ.

ಮಲಗುವ ಕೋಣೆಯಲ್ಲಿ ಫೋನ್ ಚಾರ್ಜ್ ಮಾಡಲು ಬಿಡಬೇಡಿ

ಮಲಗುವ ಮುನ್ನ ಫೋನ್​ನಲ್ಲಿ ಸ್ಕ್ರೋಲಿಂಗ್ ಮಾಡುವ ಅಭ್ಯಾಸ ಮಕ್ಕಳ ನಿದ್ದೆಯನ್ನು ಹಾಳು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹಾಸಿಗೆಯ ಬಳಿ ಫೋನ್​​ ಅನ್ನು ಚಾರ್ಜ್ ಮಾಡಲು ಮಕ್ಕಳಿಗೆ ಅನುಮತಿಸದಿರುವುದು ನಿಮ್ಮ ಜವಾಬ್ದಾರಿಯಾಗಿದೆ. ಹೀಗೆ ಮಾಡುವುದರಿಂದ ಫೋನ್‌ನ ಅನಗತ್ಯ ಬಳಕೆ ತಪ್ಪಿಸಬಹುದು.

ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಿರಿ

ಫೋನ್ ನಮ್ಮ ಬಿಡುವಿನ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮಗು ಬಿಡುವಿದ್ದಾಗಲೆಲ್ಲ ಅವರ ಜತೆ ಕೂತು ಮಾತಾಡಿ. ಇದರಿಂದ ಅವರಿಗೆ ಹೆಚ್ಚು ಕಾಲ ಮೊಬೈಲ್ ಬಳಸುವ ಅವಕಾಶ ಸಿಗುವುದಿಲ್ಲ.

ಫೋನ್ ಸುತ್ತಲೂ ಹೇರ್ ಬ್ಯಾಂಡ್ ಹಾಕಿ

ಸ್ಮಾರ್ಟ್ ಫೋನ್ ಚಟದಿಂದ ಹೊರಬರಲು ಉತ್ತಮ ಮಾರ್ಗವೆಂದರೆ ಫೋನ್ ಸುತ್ತಲೂ ಹೇರ್ ಬ್ಯಾಂಡ್ ಹಾಕುವುದು. ಇದು ಫೋನ್‌ನ ಇತರ ಬಳಕೆಗಳಾದ ಸ್ಕ್ಯಾನಿಂಗ್ ಮತ್ತು ಸಂದೇಶ ಕಳುಹಿಸುವಿಕೆಯನ್ನು ಕಷ್ಟಕರವಾಗಿಸುತ್ತದೆ. ಇದರಿಂದಾಗಿ ಫೋನ್ ಬಳಸಲು ಮನಸ್ಸಾಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net