ವಿಶ್ವದ ನಂ. 1 ಶ್ರೀಮಂತನಾಗಿದ್ದರೂ 2 ಬೆಡ್‌ರೂಮ್‌ನ ಪುಟ್ಟ ಮನೆಯಲ್ಲಿ ವಾಸ: ಇದು ಎಲಾನ್​​ ಮಸ್ಕ್​ ಸಿಂಪಲ್​ ಲೈಫ್​ ಸ್ಟೈಲ್​

converted musk
Published on

ತಮ್ಮ ಎಲ್ಲಾ ಮನೆಗಳನ್ನು ಮಾರಾಟ ಮಾಡಿ ರಾಕೆಟ್‌, ಎಲೆಕ್ಟ್ರಿಕ್ ಕಾರುಗಳು ಮತ್ತು ಅವರ ಇತರ ಉದ್ಯಮಗಳ ನಿರ್ಮಾಣದ ಮೇಲೆ ಕೇಂದ್ರೀಕರಿಸಲು ಜಗತ್ತಿನ ನಂ. 1 ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್ ಅಮೆರಿಕದ ಟೆಕ್ಸಾಸ್‌ನಲ್ಲಿ ಒಂದು ಸಣ್ಣ ಮನೆ ಖರೀದಿಸಿದ್ದಾರೆ.ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಹಾಗೂ ಟ್ವಿಟ್ಟರ್‌ ಖರೀದಿಸಿ ಎಕ್ಸ್‌ ಎಂದು ಮರುನಾಮಕರಣ ಮಾಡಿದ ಸಿಇಒ ಎಲಾನ್ ಮಸ್ಕ್‌ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ. ಇವರು ಜಗತ್ತಿನ ಶ್ರೀಮಂತ ವ್ಯಕ್ತಯಾಗಿದ್ರೂ ಕೂಡಾ ಸಿಂಪಲ್​ ಲೈಫ್​​​ಸ್ಟೈಲ್​​ ತಮ್ಮದಾಗಿಸಿಕೊಂಡಿದ್ದಾರೆ. ಟೆಕ್ಸಾಸ್‌ನಲ್ಲಿ ಒಂದು ಸಣ್ಣ ಮನೆಯನ್ನ ಖರೀದಿಸಿರುವ ಮಸ್ಕ್​, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಹಾಗೂ ಟ್ವಿಟ್ಟರ್‌ ಖರೀದಿಸಿ ಎಕ್ಸ್‌ ಎಂದು ಮರುನಾಮಕರಣ ಮಾಡಿದ ಸಿಇಒ ಎಲಾನ್ ಮಸ್ಕ್‌ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ.


ಇವರು ತಮ್ಮ ಎಲ್ಲಾ ಮನೆಗಳನ್ನು ಮಾರಾಟ ಮಾಡಿದರು ಮತ್ತು ರಾಕೆಟ್‌, ಎಲೆಕ್ಟ್ರಿಕ್ ಕಾರುಗಳು ಮತ್ತು ಅವರ ಇತರ ಉದ್ಯಮಗಳ ನಿರ್ಮಾಣದ ಮೇಲೆ ಕೇಂದ್ರೀಕರಿಸಲು ಅಮೆರಿಕದ ಟೆಕ್ಸಾಸ್‌ನಲ್ಲಿ ಒಂದು ಸಣ್ಣ ಮನೆ ಖರೀದಿಸಿದ್ದಾರೆ. ಎಲಾನ್‌ ಮಸ್ಕ್ ಅವರ ಜೀವನಚರಿತ್ರೆಕಾರ ವಾಲ್ಟರ್ ಐಸಾಕ್ಸನ್ ಈಗ ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಈ ಮನೆಯ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ.ಅವರು ಈ ಮನೆಯನ್ನು 'ಸ್ಪಾರ್ತಾನ್‌ನ ಎರಡು ಮಲಗುವ ಕೋಣೆ ಮನೆ' ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. SpaceX ನ ಅಭಿವೃದ್ಧಿ ಮತ್ತು ಪರೀಕ್ಷಾ ಸೈಟ್ ಟೆಕ್ಸಾಸ್‌ನಲ್ಲಿರುವುದರಿಂದ ಅಲ್ಲೇ 2 ಬೆಡ್‌ರೂಂ ಮನೆ ಖರೀದಿಸಿದ್ದಾರೆ.


ಈ ಮಧ್ಯೆ, ಜಗತ್ತಿನಾದ್ಯಂತ ನೆಟ್ಟಿಗರು ಈ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಗತ್ತಿನ ಶ್ರೀಮಂತ ವ್ಯಕ್ತಿ ಚಿಕ್ಕ ಮತ್ತು ಸರಳವಾದ ಮನೆಯಲ್ಲಿ ವಾಸಿಸುತ್ತಿರುವುದನ್ನು ನೋಡಿ ಅನೇಕರು ಶಾಕ್‌ ಆಗಿದ್ದು, ಸಾಕಷ್ಟು ಮಂದಿ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ. ವಾಲ್ಟರ್ ಐಸಾಕ್ಸನ್ ಹಂಚಿಕೊಂಡಿರುವ ಫೋಟೋದಲ್ಲಿ ಅಡಿಗೆ ಮನೆ ಮತ್ತು ಮರದ ಟೇಬಲ್ ಹೊಂದಿರುವ ಲಿವಿಂಗ್‌ ರೂಮಿನ ಭಾಗವನ್ನು ತೋರಿಸುತ್ತದೆ. ಮರದ ಟೇಬಲ್‌ ಮೇಲೆ ಕುಳಿತು ಫೋನ್ ಕರೆಗಳನ್ನು ಮಾಡುತ್ತಿದ್ದ ಈ ಮನೆಯಲ್ಲಿ ನಾನು ಎಲಾನ್‌ ಮಸ್ಕ್‌ ಅವರನ್ನು ಭೇಟಿಯಾಗುತ್ತಿದ್ದೆ ಎಂದು ವಾಲ್ಟರ್ ಐಸಾಕ್ಸನ್ ಬಹಿರಂಗಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net