More

    ಟ್ವಿಟರ್​ನಲ್ಲಿ ಇನ್ಮುಂದೆ ಧಾರಾಳವಾಗಿ ಬರೆಯಬಹುದು: ಆಗಲಿರುವ ಪ್ರಮುಖ ಬದಲಾವಣೆ ಏನು?

    ಬೆಂಗಳೂರು: ಮೈಕ್ರೋಬ್ಲಾಗಿಂಗ್​ ಆ್ಯಪ್ ಆಗಿರುವ​ ಟ್ವಿಟರ್​ನಲ್ಲಿ ಸದ್ಯದಲ್ಲೇ ಧಾರಾಳವಾಗಿ ಬರೆಯಬಹುದು. ಅಂಥದ್ದೊಂದು ಪ್ರಮುಖ ಬದಲಾವಣೆ ಆಗಲಿರುವ ಕುರಿತು ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಏಕೆಂದರೆ ಇದನ್ನು ಟ್ವಿಟರ್​ ಮಾಲೀಕ ಎಲಾನ್ ಮಸ್ಕ್ ಅವರೇ ಹೇಳಿಕೊಂಡಿದ್ದಾರೆ.

    ಈ ಮಹತ್ವದ ಬದಲಾವಣೆ ಆಗುತ್ತಿದ್ದಂತೆ ತುಂಬಾ ಬರೆಯುವವರು, ದೊಡ್ಡ ದೊಡ್ಡ ಬರಹಗಳನ್ನು ಹಂಚಿಕೊಳ್ಳುವವರಿಗೆ ಅನುಕೂಲವಾಗಲಿದೆ. ಅರ್ಥಾತ್, ಟ್ವಿಟರ್​ನಲ್ಲಿ ಕ್ಯಾರೆಕ್ಟರ್ ಲಿಮಿಟ್​ ಹೆಚ್ಚಾಗಲಿದೆ. ಆರಂಭದಲ್ಲಿ ಟ್ವಿಟರ್​ನಲ್ಲಿ ಬರೀ 140 ಕ್ಯಾರೆಕ್ಟರ್​ನಷ್ಟು ಮಾತ್ರ ಬರೆಯಲು ಸಾಧ್ಯವಿತ್ತು. ಆಮೇಲೆ ಅದನ್ನು ದುಪ್ಪಟ್ಟುಗೊಳಿಸಿದ್ದರಿಂದ ಸದ್ಯ ಕ್ಯಾರೆಕ್ಟರ್ ಲಿಮಿಟ್ 280 ಇದೆ.

    ಆದರೆ ಈ ಮಿತಿ ಇನ್ನೂ ಹೆಚ್ಚಾಗಲಿರುವುದನ್ನು ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ‘ಟ್ವಿಟರ್​​ನ ಕ್ಯಾರೆಕ್ಟರ್ ಲಿಮಿಟ್​ 280ರಿಂದ 4000 ಆಗಲಿದೆಯಂತೆ, ಹೌದಾ?’ ಎಂಬುದಾಗಿ ಬಳಕೆದಾರರೊಬ್ಬರು ಕೇಳಿರುವ ಪ್ರಶ್ನೆಗೆ ಖುದ್ದು ಎಲಾನ್ ಮಸ್ಕ್​ ಯೆಸ್ ಎಂದು ಹೇಳುವ ಮೂಲಕ ಹೌದು ಎಂಬುದನ್ನು ಖಚಿತ ಪಡಿಸಿದ್ದಾರೆ. ಅಂದಹಾಗೆ ಇದು ಯಾವತ್ತಿನಿಂದ ಜಾರಿಗೆ ಬರಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಇದು ಜಾರಿಗೆ ಬಂದ ಬಳಿ ಥ್ರೆಡ್ ಮೂಲಕ ಸರಣಿ ಟ್ವೀಟ್ ಮಾಡುವ ಅನಿವಾರ್ಯತೆ ತಪ್ಪಲಿದೆ. ಒಂದೇ ಟ್ವೀಟ್​ನಲ್ಲಿ ಜಾಸ್ತಿ ವಿಷಯ ಹೇಳಬಹುದಾಗಿರುತ್ತದೆ.

    ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

    ‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!

    ‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts