ಆನೆ ಕಂದಕ ದುರಸ್ತಿ: ರೆಂಜಿಲಾಡಿ ಗ್ರಾಮಸ್ಥರಿಂದ ಅರಣ್ಯಾಧಿಕಾರಿಗೆ ಮನವಿ

Kdb_Elephant
Published on

ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಅರಣ್ಯದಂಚಿನಲ್ಲಿ ನಿರ್ಮಾಣ ಮಾಡಲಾಗಿರುವ ಆನೆ ಕಂದಕವನ್ನು ವಿಸ್ತರಿಸುವಂತೆ ರೆಂಜಿಲಾಡಿ ಗ್ರಾಮಸ್ಥರ ನಿಯೋಗ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಕಚೇರಿಗೆ ರೆಂಜಿಲಾಡಿ ಭಾಗದ ಹೇರ, ಆಲಾಟ, ಎಲುವಾಳೆ, ಮಲ್ಯೋಡಿ, ನಿಡ್ಡೋ ಪ್ರದೇಶದ ಗ್ರಾಮಸ್ಥರ ನಿಯೋಗ ತೆರಳಿ ಮನವಿ ಸಲ್ಲಿಸಿದರು.

ಪ್ರಮುಖರಾದ ಮೃತ್ಯುಂಜಯ ಭಿಡೆ ಕೆರೆತೋಟ, ಗಣೇಶ್ ಭಟ್ ನಿಡ್ಡೋ, ಚಂದ್ರಶೇಖರ ಗೌಡ ಎಲುವಾಳೆ, ಚಂದ್ರಶೇಖರ ಕಾಮತ್, ಸೀತಾರಾಮ ಎಲುವಾಳೆ, ಭಾಸ್ಕರ ಗೌಡ ಎಲುವಾಳೆ, ರಮೇಶ್ ಎಲುವಾಳೆ, ಯತೀಶ್ ಜಾಲು, ರಾಮಚಂದ್ರ ಹೇರ, ಯೋಗೀಶ್ ಬ್ರಾಂತಿಗುಂಡಿ, ಪುನೀತ್ ಎಲುವಾಳೆ, ವಿಶ್ವನಾಥ ಹೇರ, ಹರಿಪ್ರಸಾದ್ ಎಲುವಾಳೆ, ಗಣೇಶ್ ತಲೆಕ್ಕಿ, ಜನಾರ್ದನ ಎಲುವಾಳೆ, ಆನಂದ ಹೇರ, ಸುರೇಶ್ ಎಲುವಾಳೆ ಮತ್ತು ರೆಂಜಿಲಾಡಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net