

ಮೈಸೂರು: ಸುಣ್ಣದಕೇರಿಯ 8ನೇ ಕ್ರಾಸ್‌ನಲ್ಲಿರುವ ಲಾಂಡ್ರಿ ಅಂಗಡಿಯಲ್ಲಿ ಶನಿವಾರ ತಡ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಂಗಡಿ ಬೆಂಕಿಗೆ ಆಹುತಿಯಾಗಿದೆ.
ಸುಣ್ಣದಕೇರಿಯ ಸಪ್ತಗಿರಿ ಡ್ರೈ ಕ್ಲಿನಿರ್ ಪ್ರಭು ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ರಾತ್ರಿ ಅಂಗಡಿ ಬೆಂಕಿಗೆ ಆಹುತಿಯಾಗಿರುವ ವಿಚಾರವನ್ನು ಸ್ಥಳೀಯರು ಅಂಗಡಿ ಮಾಲೀಕರಿಗೆ ತಿಳಿಸಿದರು. ಸ್ಥಳೀಯರು ಹಾಗೂ ಮಾಲೀಕರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಂಗಡಿಯಲ್ಲಿದ್ದ ಬಟ್ಟೆಗಳು, ಪಿಠೋಪಕರಣಗಳು, ಬೆಂಕಿಗೆ ಆಹುತಿಯಾಗಿದೆ.