ವಿದ್ಯುತ್ ಚಾಲಿತ ವಾಹನ ಮಾರ್ಪಾಡು : ಬೈಂದೂರು ಐಟಿಐ ವಿದ್ಯಾರ್ಥಿಗಳ ಸಾಧನೆ ; ಆರು ತಿಂಗಳಲ್ಲಿ ಪ್ರಾಜೆಕ್ಟ್ ಪೂರ್ಣ

iti
ಇಂಧನ ಚಾಲಿತ ವಾಹನವನ್ನು ವಿದ್ಯುತ್ ಚಾಲಿತ ವಾಹನವನ್ನಾಗಿ ಮಾರ್ಪಡಿಸುವ ಪ್ರಾಜೆಕ್ಟ್ ವರ್ಕ್ ಮಾಡಿದ ಬೈಂದೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2022-24ರ ಅಂತಿಮ ವರ್ಷದ ಮೆಕಾನಿಕ್ ಇಲೆಕ್ಟ್ರಿಕ್ ವೆಹಿಕಲ್ ವಿಭಾಗದ 22 ವಿದ್ಯಾರ್ಥಿಗಳು ಟಾಟಾ ಸಹಭಾಗಿತ್ವದ ಉದ್ಯೋಗ ಪ್ರಾಜೆಕ್ಟ್‌ನಡಿ ಹಳೆಯ ಇಂಧನ ಚಾಲಿತ ವಾಹನವನ್ನು ವಿದ್ಯುತ್ ಚಾಲಿತ ವಾಹನವನ್ನಾಗಿ ಮಾರ್ಪಡಿಸಿದ್ದಾರೆ.
ಹಳೇ ಆಟೋರಿಕ್ಷಾ ಖರೀದಿಸಿ ಅದನ್ನು ಇಲೆಕ್ಟ್ರಿಕ್ ವಾಹನವನ್ನಾಗಿ ಮಾರ್ಪಡಿಸಿದ್ದಾರೆ. ಆಟೋದ ಕೆಟ್ಟುಹೋದ ಭಾಗ ತೆಗೆದು ಬಿಡಿ ಭಾಗಗಳನ್ನು ಬೇರೆ ಬೇರೆ ಕಡೆಯಿಂದ ಹುಡುಕಿ ತಂದು ಅಳವಡಿಸಿದ್ದಾರೆ. ಇಲೆಕ್ಟ್ರಿಕ್ ವೆಹಿಕಲ್‌ನ ಚಾಲನೆಗೆ ಬೇಕಾಗುವಂತೆ ಟ್ರಾನ್ಸ್‌ಮಿಷನ್ ಮಾರ್ಪಡಿಸಿ ಚೈನ್‌ಡ್ರೈವ್ ಅಳವಡಿಸಲಾಗಿದೆ. ಅದಕ್ಕೆ ಬ್ಯಾಟರಿ, ಮೋಟಾರ್, ಕಂಟ್ರೋಲರ್ ಹಾಗೂ ಬೇರೆ ಉಪಕರಣಗಳನ್ನ ಅಳವಡಿಸಲಾಗಿದೆ. ಆರು ತಿಂಗಳಲ್ಲಿ ಪ್ರಾಜೆಕ್ಟ್ ಮುಗಿಸಿದ್ದು, ಅದಕ್ಕೆ ತಗುಲಿದ ಎಲ್ಲ ಖರ್ಚು ವೆಚ್ಚವನ್ನು ವಿದ್ಯಾರ್ಥಿಗಳೇ ಭರಿಸಿದ್ದಾರೆ.

ಮಹೇಶ್ ಎಸ್.ನಾಯ್ಕ ಹಾಗೂ ಪ್ರದೀಪ್ ಆಚಾರ್ಯ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಬ್ದುಲ್ ಸತ್ತಾರ್, ಅಭಿಲಾಷ್, ಅಖಿಲೇಶ್, ಅಭಿಷೇಕ್ ಕುಂದಾಪುರ, ಅಶ್ವತ್ಥ, ಆಕಾಶ್, ಧನುಷ್, ಕುಮಾರ್ ಎಸ್., ಕಾರ್ತಿಕ್, ನಿತೇಶ್, ಸಂಕೇತ ಕುಮಾರ್, ಮನುಷ್ ಶೆಟ್ಟಿ, ಶಶಿಕುಮಾರ್ ಶೆಟ್ಟಿ, ಸೌರವ್ ಕುಂದಾಪುರ, ರತನ್, ಮಣಿಕಂಠ, ಸುಭಾಷ್, ಸುಬ್ರಮಣ್ಯ, ರೋಹಿತ್, ವಸಂತ ಗೊಂಡ, ವೆಂಕಟೇಶ್ ಗೊಂಡ, ವಿನಯ್ ಯೋಜನಾ ತಂಡದಲ್ಲಿದ್ದರು. ಪ್ರಾಂಶುಪಾಲ ಗಂಗಾಧರಪ್ಪ, ಕಿರಿಯ ತರಬೇತಿ ಅಧಿಕಾರಿಗಳಾದ ಚಂದ್ರಪ್ಪ ಹದಡಿ, ರೇಷ್ಮಾ ಕುಮಾರಿ ಮತ್ತು ಸಿಬ್ಬಂದಿ ಸಹಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net