ಹಳಿಯಾಳ: ಶಾಲೆಯಲ್ಲಿ ವಿದ್ಯುತ್ ಶಾಕ್ (electric shook ) ತಗುಲಿ ಬಾಲಕಿ ಮೃತಪಟ್ಟ ಘಟನೆ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
2 ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಬಸವರಾಜ ಗೌಳಿ(8) ಮೃತ ಬಾಲಕಿಯಾಗಿದ್ದು, ಪಾಲಕರ ಗೋಳು ಮುಗಿಲು ಮುಟ್ಟಿದೆ. ಇಡೀ ಊರಿನ ಜನ ಶಾಲೆಯ ಬಳಿ ನೆರೆದಿದ್ದಾರೆ.
ಶಾಲೆಯ ಆವರಣದಲ್ಲಿ ಇದ್ದ ಬೋರ್ ವೆಲ್‌ಗೆ ಸಂಪರ್ಕ ಕೊಟ್ಟಿದ್ದ ವಿದ್ಯುತ್ ಲೈನ್ ತುಂಡಾಗಿ ಬಿದ್ದಿತ್ತು. ಮಧ್ಯಂತರ ಬಿಡುವಿನಲ್ಲಿ ಶೌಚಗೃಹಕ್ಕೆ ತೆರಳಿದ್ದ ಬಾಲಕಿ ಅದನ್ನು ತುಳಿದು ಶಾಕ್ ತಗುಲಿ, ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಹಳಿಯಾಳ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕೀಯ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಶಾಸಕ ಆರ್.ವಿ.ದೇಶಪಾಂಡೆ ಸ್ಥಳಕ್ಕೆ ತೆರಳಿ, ಪಾಲಕರಿಗೆ ಸಾಂತ್ವನ ಹೇಳಿದ್ದಾರೆ.
electric shook
ಶಾಲೆಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಮತ್ತು ತುಂಡಾದ ಲೈನ್‌ನ್ನು ಗಮ್ ಟೇಪ್ ಹಚ್ಚಿ ಇಡಲಾಗಿತ್ತು. ಅದು ತುಂಡಾಗಿ ಬಿದ್ದಿದ್ದು, ಬಾಲಕಿ ಸಾವಿಗೆ ಕಾರಣವಾಗಿದೆ.
ಇದನ್ನೂ ಓದಿ: https://www.vijayavani.net/bank-account-hacked-and-defrauded