ಸರ್ಕಾರಿ ಸಾರಿಗೆಗೂ ಇ-ವಾಹನ! ಈ ರಾಜ್ಯದಲ್ಲಿ ಓಡಾಡಲಿವೆ ಎಲೆಕ್ಟ್ರಿಕ್​ ಬಸ್​​

ebus
Published on

ಕಾನ್ಪುರ: ಪೆಟ್ರೋಲ್​, ಡೀಸೆಲ್​ಗಳ ಬೆಲೆ ಗಗನಚುಂಬಿಯಾಗುತ್ತಿವೆ. ಹವಾಮಾನ ವೈಪರೀತ್ಯಗಳನ್ನು ತಡೆಯಲು ಜಗತ್ತಿನಾದ್ಯಂತ ಸರ್ಕಾರಗಳು ಪರ್ಯಾಯ ಇಂಧನಗಳ ಮೇಲೆ ಓಡುವ ವಾಹನಗಳನ್ನು ಪ್ರಮೋಟ್​ ಮಾಡುತ್ತಿವೆ. ಹೀಗಿರುವಾಗ ಭಾರತದಲ್ಲೂ ಎಲೆಕ್ಟ್ರಿಕ್​ ಕಾರು ಮತ್ತು ಬೈಕುಗಳು ಮಾರುಕಟ್ಟೆ ಪಡೆಯುತ್ತಿವೆ.

ಇದೇ ದಿಕ್ಕಿನಲ್ಲಿ ನಡೆದಿರುವ ಪ್ರಯತ್ನದಲ್ಲಿ ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಗೂ ಎಲೆಕ್ಟ್ರಿಕ್​ ವಾಹನಗಳ ಸೇರ್ಪಡೆ ಮಾಡುವ ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರವು ಇಂದು 20 ಎಲೆಕ್ಟ್ರಿಕ್​ ಬಸ್​ಗಳಿಗೆ ಕಾನ್ಪುರ ನಗರ ಸಾರಿಗೆ ಸಂಸ್ಥೆಯಡಿ ಚಾಲನೆ ನೀಡಿದೆ.

ರಾಜ್ಯ ಸಚಿವ ಸತೀಶ್​ ಮಹಾನಾ 20 ಎಲೆಕ್ಟ್ರಿಕ್​ ಬಸ್​ಗಳೊಂದಿಗೆ ಒಂದು ಚಾರ್ಜಿಂಗ್​ ಸ್ಟೇಷನ್​ಗೂ ವಿದ್ಯುಕ್ತ ಚಾಲನೆ ನೀಡಿದರು. ಮುಂದಿನ 15 ದಿನಗಳಲ್ಲಿ ಇನ್ನೂ ಸುಮಾರು 60 ಎಲೆಕ್ಟ್ರಿಕ್​ ಬಸ್​ಗಳನ್ನು ಕಾನ್ಪುರ ನಗರದ ರಸ್ತೆಗಳ ಮೇಲೆ ಕಾಣಬಹುದು ಎಂದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net