

ಕಾಸರಗೋಡು: ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ ಕ್ಲಬ್ ಕಚೇರಿಯಲ್ಲಿ ಜರುಗಿತು. ಅಧ್ಯಕ್ಷ ಸಂತೋಷ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರನ್ನಾಗಿ ಪದ್ಮನಾಭ ಸುವರ್ಣ ಅವರನ್ನು ಆಯ್ಕೆ ಮಾಡಲಾಯಿತು. ಚಂದ್ರ ಅಮೆಕ್ಕಳ ಅಧ್ಯಕ್ಷ, ಮಹೇಶ್ ಬಜಕೂಡ್ಲು, ದಯಾನಂದ ರೈ ಬಜಕೂಡ್ಲು ಉಪಾಧ್ಯಕ್ಷರು, ಸಂತೋಷ್ ಖಂಡಿಗೆ ಪ್ರಧಾನ ಕಾರ್ಯದರ್ಶಿ, ಅಶ್ವಥ್ ಪೂಜಾರಿ, ಪ್ರವೀಣ್ ರೈ ಬಜಕೂಡ್ಲು ಕಾರ್ಯದರ್ಶಿಗಳು, ಹರೀಶ್ ಪೂಜಾರಿ ಬಜಕೂಡ್ಲು ಕೋಶಾಧಿಕಾರಿ, ಭರತ್‌ರಾಜ್ ಕ್ರೀಡಾ ಕಾರ್ಯದರ್ಶಿ, ದೀಕ್ಷಿತ್ ಬಜಕೂಡ್ಲು ಅವರನ್ನು ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.