More

    ವೋಟ್ ಹಾಕುವಲ್ಲಿ ಪುರುಷರೇ ಮೇಲುಗೈ: ಜಿಲ್ಲೆಯಲ್ಲಿ ಶೇ.84.45ರಷ್ಟು ಮತದಾನ

    ಮಂಡ್ಯ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಕ್ಕೆ ಮೇ.10ರಂದು ನಡೆದ ಚುನಾವಣೆಯಲ್ಲಿ ಶೇ.84.45ರಷ್ಟು ಮತದಾನವಾಗಿದೆ. ಇದರೊಂದಿಗೆ 2018ರ ದಾಖಲೆಯನ್ನು ಸರಿಗಟ್ಟಿದೆ. ಅಂದರೆ ಆ ಚುನಾವಣೆಯಲ್ಲಿ ಶೇ.82.37ರಷ್ಟು ಮತದಾನವಾಗಿತ್ತು.
    ಇನ್ನು ಜಿಲ್ಲೆಯಲ್ಲಿ ಮತದಾನ ಮಾಡುವಲ್ಲಿ ಪುರುಷರೇ ಮುಂದಿದ್ದಾರೆ. ಈ ಚುನಾವಣೆಯಲ್ಲಿ ಮತದಾನ ಮಾಡಲು 15,33,831 ಜನರು ಅರ್ಹರಾಗಿದ್ದರು. ಈ ಪೈಕಿ 12,95,319 ಜನರು ಮತದಾನ ಮಾಡಿದ್ದಾರೆ. ಇನ್ನು 7,59,323 ಪುರುಷ ಮತದಾರರಿದ್ದು, ಇದರಲ್ಲಿ 6,46,227 ಜನರು ಮತ ಚಲಾಯಿಸಿದ್ದಾರೆ. ಇದರೊಂದಿಗೆ 1,13,096 ಜನರು ನಿರ್ಲಕ್ಷೃ ತೋರಿದ್ದಾರೆ. ಅಂತೆಯೇ ಜಿಲ್ಲೆಯಲ್ಲಿ 7,79,323 ಮಹಿಳಾ ಮತದಾರರಿದ್ದು, ಈ ಪೈಕಿ 6,49,049 ಮಹಿಳೆಯರು ಮತದಾನ ಮಾಡಿದ್ದು, 1,30,274 ಜನರು ಮತದಾನ ಮಾಡಿಲ್ಲ. 145 ತೃತೀಯ ಲಿಂಗಿಗಳ ಪೈಕಿ 43 ಜನರಷ್ಟೇ ಮತ ಹಾಕಿದ್ದಾರೆ.
    ತಾಲೂಕುವಾರು ಗಮನಿಸಿದರೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತದಾನ(ಶೇ.91.01), ಮಂಡ್ಯ ಕ್ಷೇತ್ರದಲ್ಲಿ ಅತಿ ಕಡಿಮೆ(ಶೇ.77.14)ರಷ್ಟು ಮತ ಚಲಾವಣೆಯಾಗಿದೆ. ಉಳಿದಂತೆ ಮಳವಳ್ಳಿ ಕ್ಷೇತ್ರದಲ್ಲಿ ಶೇ.78.90, ಮದ್ದೂರಲ್ಲಿ ಶೇ.84.99, ಶ್ರೀರಂಗಪಟ್ಟಣದಲ್ಲಿ ಶೇ.86.27, ನಾಗಮಂಗಲದಲ್ಲಿ ಶೇ.89.00 ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.85.48ರಷ್ಟು ಮತದಾನವಾಗಿದೆ. ಮತದಾನದ ವೇಳೆ ಸಣ್ಣಪುಟ್ಟ ಗಲಾಟೆ, ಗೊಂದಲ, ಲೋಷದೋಷ ಹೊರತುಪಡಿಸಿ ಶಾಂತಿಯುತವಾಗಿ ಮುಗಿದಿದ್ದು, ಎಲ್ಲರ ಚಿತ್ತ ಮತ ಎಣಿಕೆ ಕೇಂದ್ರದತ್ತ ನೆಟ್ಟಿದೆ.
    ಜಿಲ್ಲಾಧಿಕಾರಿಗಳಿಂದ ಅಭಿನಂದನೆ: ವಿಧಾನಭಾ ಚುನಾವಣೆಯ ಮತದಾನ ಪ್ರಕ್ರಿಯೆ ಸುಗಮವಾಗಿ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಇದರ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅಭಿನಂದನೆ ಸಲ್ಲಿಸಿದ್ದಾರೆ.
    ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಪಂ, ಚುನಾವಣಾಧಿಕಾರಿಗಳು/ ಸಹಾಯಕ ಚುನಾವಣಾಧಿಕಾರಿಗಳು, ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಸಹಕಾರದಿಂದ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಹಿಂದಿನ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿರುವುದು ಸಂತಸದ ವಿಷಯ. ಅಂತೆಯೇ ಸ್ವೀಪ್ ರಾಯಭಾರಿಗಳಾಗಿದ್ದ ನಟ ನೀನಾಸಂ ಸತೀಶ್ ಹಾಗೂ ಅಂಗವಿಕಲ ಚುನಾವಣಾ ರಾಯಭಾರಿ ಡಾ.ಚಲುವರಾಜು, ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್‌ಗಳು ಉತ್ತಮ ಸಹಕಾರ ನೀಡಿದರು ಎಂದು ಪ್ರಕಟಣೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts