

ಆನೇಕಲ್ : ತಾಲೂಕು ವಕೀಲರ ಸಂದ ಆಡಳಿತ ಮಂಡಳಿಗೆ ಆ.3ರಂದು ಚುನಾವಣೆ ನಡೆಯಲಿದ್ದು, ಹಿರಿಯ ವಕೀಲ ವೈ.ಪ್ರಕಾಶ್ ಮತ್ತು ಎಂ.ಆರ್.ವೇಣುಗೋಪಾಲ್ ನೇತೃತ್ವದ ಗುಂಪುಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಎಂ.ಆರ್.ವೇಣುಗೋಪಾಲ್ ತಂಡದಿಂದ ಅಧ್ಯ ಸ್ಥಾನಕ್ಕೆ ವೇಣುಗೋಪಾಲ್, ಉಪಾಧ್ಯ ಸ್ಥಾನಕ್ಕೆ ಶಿವರಾಜ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್.ಬಾಲರೆಡ್ಡಿ, ಖಜಾಂಚಿ ಸ್ಥಾನಕ್ಕೆ ಶಾರದಾ ಮಣಿ, ಕಾರ್ಯಕಾರಿ ಸಮಿತಿಗೆ ನೀಲಮ್ಮಾ, ನಿರ್ಮಲಾ, ಆಶಾ, ಲಕ್ಷಿ$್ಮ ಸಂಪತ್, ಮೋಹನ್, ಮುರಳಿಗೌಡ, ಮೂರ್ತಿ, ಎ.ಪುರುಷೋತ್ತಮ, ರಮೇಶ್, ಸತೀಶ್, ಮಾದೇಶ್, ಶಾಂತಕುಮಾರ್, ಶಿವಕುಮಾರ್, ತಿಮ್ಮರಾಜು ನಾಮಪತ್ರ ಸಲ್ಲಿಸಿದರು.
ಮತ್ತೊಂದು ತಂಡದಿಂದ ವೈ.ಪ್ರಕಾಶ್ ಅಧ್ಯ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಉಪಾಧ್ಯ ಸ್ಥಾನಕ್ಕೆ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರವೀಶ್ ಕುಮಾರ್, ಖಜಾಂಚಿ ಸ್ಥಾನಕ್ಕೆ ಗೌರಮ್ಮ, ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳಾಗಿ ವೀಣಾ, ನಾಗರತ್ನಾ, ಅರುಣಾಕುಮಾರಿ, ನಾರಾಯಣಸ್ವಾಮಿ, ಉದಯ್ ಕುಮಾರ್, ಮೋಹನ್ ಕಾಂತ, ಮುರುಳಿ, ಮೂರ್ತಿ ಕುಮಾರ್, ನಾಗರಾಜು, ಪ್ರವಿಣ್, ರಮೇಶ್, ವಿಕ್ರಂ, ಶಿವಣ್ಣ, ಮೋಹನ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ವಕೀಲರ ಸಂದ ಚುನಾವಣಾ ಕಣ ರಂಗೇರಿದ್ದು, ಎರಡೂ ಗುಂಪುಗಳು ಮತದಾರರನ್ನು ಸೆಳೆಯಲು ಸಭೆ, ಭೋಜನಕೂಟ ಸೇರಿ ವಿವಿಧ ಕಾರ್ಯಕ್ರಮಗ ಆಯೋಜಿಸುತ್ತಿವೆ.