More

    ಎಲ್ಲೆಲ್ಲೂ ಮೋದಿ..ಮೋದಿ; ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ನರೇಂದ್ರ ಮೋದಿ ಪರ ಚುನಾವಣೆ ಪ್ರಚಾರ

    ಬನಹಟ್ಟಿ: ಮದುವೆ ಕುರಿತಾಗಿ ನವ ವಧು- ವರರು ವಿಭಿನ್ನವಾಗಿರಬೇಕೆಂದು ಯೋಚಿಸುತ್ತಾರೆ. ಹೀಗೆ ಇಲ್ಲೊಂದು ಜೋಡಿ ವಿಭಿನ್ನವಾಗಿ ಯೋಚನೆ ಮಾಡಿ ಮದುವೆ ಆಮಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿ ಚುನಾವಣಾ ಪ್ರಚಾರವನ್ನು ಮಾಡಿದೆ.

    ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ವಧುವಿನ ಕಡೆಯವರು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಮತಯಾಚಿಸಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಲಗ್ನ ಪತ್ರಿಕೆ ಮೂಲಕ ಚುನಾವಣೆ ಪ್ರಚಾರ ಬಲು ಜೋರಾಗಿ ನಡೆಯುತ್ತಿದೆ.

    2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡಿದರೆ ನನ್ನ ಮದುವೆಗೆ ನಿಜವಾದ ಉಡುಗೊರೆ ಎಂದು ಮುದ್ರಿಸುವ ಮೂಲಕ ಮೋದಿ ಅಭಿಮಾನಿಗಳು ಸದ್ದಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ ಬನಹಟ್ಟಿಯ ಪ್ರಭು ಕರಲಟ್ಟಿ ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ಹೀಗಾಗಿ ಪುತ್ರಿಯ ವಿವಾಹ ಆಮಂತ್ರಣದಲ್ಲಿ ಮೋದಿ ಭಾವಚಿತ್ರ ಮುದ್ರಿಸಿ ಮೋದಿಯನ್ನು ಮತ್ತೊಮ್ಮೆ ಬೆಂಬಲಿಸಬೇಕೆಂದು ಸಂದೇಶ ಸಾರಿದ್ದಾರೆ.

    ಜ.28ರಂದು ವಿವಾಹ ನಡೆದಿದ್ದು, ಗಂಡಿನ ಮನೆಯವರನ್ನೂ ಒಪ್ಪಿಸಿ ಆಮಂತ್ರಣ ಪತ್ರಿಕೆಯಲ್ಲಿ ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ-2024ಎಂದು ಕಮಲ ಚಿಹ್ನೆಯ ಮೂಲಕ ಟ್ಯಾಗ್‌ ಲೈನ್ ಜನರನ್ನು ಆಕರ್ಷಿಸುತ್ತಿದೆ.

    ಬಾವಿಗೆ ಜಿಗಿದ ತಂಗಿ ಕಾಪಾಡಲು ನೀರಿಗೆ ಹಾರಿ ತಾನೂ ಪ್ರಾಣ ಬಿಟ್ಟ ಅಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts