ಸತೀಶ್ ಕಾಶಿಪಟ್ಣ ಅಧರಾಗಿ ಆಯ್ಕೆ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ

satish
ಸತೀಶ್ ಕೆ.ಕಾಶಿಪಟ್ಣ
Published on

ಬೆಳ್ತಂಗಡಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಉಪಾಧ್ಯಕ್ಷರಾಗಿ ದಿವಾಕರ ನಾರಾವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಆಡಳಿತ ಮಂಡಳಿಗೆ ಐದು ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನದ ಚುನಾವಣೆ ಜು.14ರಂದು ನಿಗದಿಯಾಗಿತ್ತು. ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳಾ ಮೀಸಲು ಸ್ಥಾನಕ್ಕೆ ಮೀಸಲಿರಿಸಿದ ಸ್ಥಾನಗಳಿಂದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸತೀಶ್ ಕೆ. ಕಾಶಿಪಟ್ಣ, ಸುಂದರ ಗೌಡ ಇಚ್ಚಿಲ ಉಜಿರೆ, ಮಹಾವೀರ ಜೈನ್ ನಾರಾವಿ, ದುಗ್ಗಪ್ಪ ಗೌಡ ತಣ್ಣೀರುಪಂಥ, ಸಂಜೀವ ಎಲ್ ನಾರಾವಿ, ಪ್ರಶಾಂತ್ ಬಿ. ಬಡಕೋಡಿ, ಎನ್.ದಿವಾಕರ ಭಂಡಾರಿ ನಾರಾವಿ, ಪ್ರವೀಣ್ ಗಿಲ್ಬರ್ಟ್ ಪಿಂಟೋ ಕಾಶಿಪಟ್ಣ, ಸವಿತಾ ರಾಜೇಶ್ ಶೆಟ್ಟಿ ಪೆರಾಡಿ, ಗುಣವತಿ ಕುಕ್ಕೇಡಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಚುನಾವಣಾ ಉಸ್ತುವಾರಿಯಾಗಿ ಶೇಖರ್ ಕುಕ್ಕೇಡಿ ಭಾಗವಹಿಸಿದ್ದರು. ಪ್ರತಿಮಾ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಆದರ್ಶ್ ಜೈನ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net