ಡೆಡ್ಲಿ ಕೋವಿಡ್​-19ನಿಂದ ತುಮಕೂರಿನಲ್ಲಿ ವೃದ್ಧೆ ಸಾವು; ರಾಜ್ಯದಲ್ಲಿ 43ಕ್ಕೇರಿದ ಮೃತರ ಸಂಖ್ಯೆ

corona
Published on

ತುಮಕೂರು: ಡೆಡ್ಲಿ ಕೊವಿಡ್​-19ನಿಂದ ತುಮಕೂರಿನಲ್ಲಿ ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಇವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವೀರಸಾಗರದವಾಗಿದ್ದು, 55ವರ್ಷ ವಯಸ್ಸಾಗಿತ್ತು.

ಕಳೆದ ಎರಡು ವರ್ಷಗಳಿಂದ ಖಿನ್ನತೆಗೆ ಒಳಗಾಗಿದ್ದ ಇವರಲ್ಲಿ ಮೇ 22ರಂದು ಕೊವಿಡ್​-19 ದೃಢಪಟ್ಟಿತ್ತು. ಶ್ವಾಸಕೋಶ ಸಂಪೂರ್ಣ ಹಾಳಾಗಿತ್ತು. ಇಂದು ಸಂಜೆ 9ಗಂಟೆಗೆ ತುಮಕೂರಿನ ಕೊವಿಡ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ವೃದ್ಧೆಯ ಸಾವಿನಿಂದ ರಾಜ್ಯದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net