ಹೆತ್ತ ಮಗನ ಪ್ರಾಣ ತೆಗೆದು ಪೊಲೀಸರಿಗೆ ಶರಣಾದ ವಯೋವೃದ್ಧ

man 01
ಸಾಂದರ್ಭಿಕ ಚಿತ್ರ
Published on

ಕೊತ್ತಗುಡೆಂ: ಮದ್ಯವ್ಯಸನಿಯಾಗಿದ್ದ ತನ್ನ ಮಗನನ್ನು ವಯೋವೃದ್ಧನೊಬ್ಬ ಕೊಂದು ಪೊಲೀಸರಿಗೆ ಶರಣಾದ ಘಟನೆ ತೆಲಂಗಾಣದ ಕೋತಗುಡೆಂನಲ್ಲಿ ನಡೆದಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ಹೆಚ್ಚುತ್ತಿರುವ ಧೂಮಪಾನ ದೃಶ್ಯಗಳು: ಕೂಡಲೇ ಕತ್ತರಿ ಹಾಕಬೇಕೆಂದು ಒತ್ತಾಯ

ಮೃತನನ್ನು ಜಮ್ಮುಲಾ ಶಂಕರ್ (35) ಎಂದು ಗುರುತಿಸಲಾಗಿದ್ದು, ತೀವ್ರ ಕುಡಿತದ ಚಟ ಹೊಂದಿದ್ದು ನಿರುದ್ಯೋಗಿಯಾಗಿದ್ದ. ಆತನ ತಂದೆ ರಾಜಯ್ಯನೇ ಕೊಲೆಗೈದ ಆರೋಪಿಯಾಗಿದ್ದು, 80ರ ಇಳಿವಯಸ್ಸಿನಲ್ಲಿಯೂ ಜೀವನೋಪಾಯಕ್ಕಾಗಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದನು.

ಮದ್ಯ ಖರೀದಿಸಲು ಹಣಕ್ಕಾಗಿ ಪೋಷಕರಿಗೆ ಕಿರುಕುಳ ನೀಡುತ್ತಿದ್ದ ಆತನ ಹಿಂಸೆಯನ್ನು ತಾಳಲಾರದೇ ರಾಜಯ್ಯ ಮಂಗಳವಾರದಂದು ನಸುಕಿನ ವೇಳೆಯಲ್ಲಿ ಮನೆಯಲ್ಲಿ ಮಲಗಿದ್ದ ಶಂಕರ್‌ನನ್ನು ಕಡಿದು ಕೊಲೆ ಮಾಡಿ ನಂತರ ಪೊಲೀಸರ ಮುಂದೆ ಶರಣಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಒನ್​​ಟೌನ್ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net