ಪೆರ್ಮುದೆಯಲ್ಲಿ ವೃದ್ಧರ ದಿನಾಚರಣೆ

elderly
ಭಾರತೀಯ ಕೆಥೋಲಿಕ್ ಯುವ ಸಂಚಲನ ಪೆರ್ಮುದೆ ಘಟಕ ವತಿಯಿಂದ ವೃದ್ಧರ ದಿನವನ್ನು ಆಚರಿಸಲಾಯಿತು
Published on

ಕಾಸರಗೋಡು: ಭಾರತೀಯ ಕೆಥೋಲಿಕ್ ಯುವ ಸಂಚಲನ ಪೆರ್ಮುದೆ ಘಟಕದ ಆಶ್ರಯದಲ್ಲಿ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ವೃದ್ಧರ ದಿನವನ್ನು ಆಚರಿಸಲಾಯಿತು. ಬದುಕಿನ ದಾರಿ ತೋರಿಸಿದ ಹಿರಿಯರಿಗೆ ಪುಷ್ಪ ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ಧರ್ಮಗುರು ಜೆರಾಲ್ಡ್ ಡಿ ಸೋಜ ಹಿರಿಯರನ್ನು ಉದ್ದೇಶಿಸಿ ಮಾತನಾಡಿದರು.

ಹಿರಿಯರಾದ ಪೈವಳಿಕೆ ಪಂಚಾಯಿತಿ ಮಾಜಿ ಸದಸ್ಯೆ ತೆರೆಸಾ ಡಿ ಸೋಜ ಅನುಭವಗಳನ್ನು ಹಂಚಿಕೊಂಡರು. ಹಿರಿಯ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಿ ಹಾಡು ಹಾಡಲಾಯಿತು. ಸಹಾಯಕ ಧರ್ಮಗುರು ಫಾ.ಕ್ಲೋಡ್ ಕೋರ್ಡಾ, ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೆರಾ, ಕಾರ್ಯದರ್ಶಿ ಲ್ಯಾನ್ಸಿ ಡಿ ಸೋಜ ಉಪಸ್ಥಿತರಿದ್ದರು. ಮೋನಿಕಾ ಡಿ ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net