ಮಹಾಕಾಳಿ ದೇವಳದಲ್ಲಿ ಏಕಾಹ ಭಜನೆ

bhajane
ಗಂಗೊಳ್ಳಿಯ ಕಲೈಕಾರ್ ಮಠ ಶ್ರೀ ನಗರ ಮಹಾಕಾಳಿ ಅಮ್ಮನವರ ಮತ್ತು ಶ್ರೀ ಕಲ್ಲುಕುಟ್ಟಿಗ ದೇವಸ್ಥಾನದಲ್ಲಿ ಏಕಾಹ ಭಜನೆ ಆರಂಭವಾಯಿತು
Published on

ಗಂಗೊಳ್ಳಿ: ಇಲ್ಲಿನ ಕಲೈಕಾರ್ ಮಠ ಶ್ರೀನಗರ ಮಹಾಕಾಳಿ ಅಮ್ಮನವರ ಮತ್ತು ಶ್ರೀ ಕಲ್ಲುಕುಟ್ಟಿಗ ದೇವಸ್ಥಾನದಲ್ಲಿ ವರ್ಷಾವಧಿ ಏಕಾಹ ಭಜನೆ ಶುಕ್ರವಾರ ಆರಂಭವಾಯಿತು.

ಅರ್ಚಕ ಜಿ.ಲಕ್ಷ್ಮೀನಾರಾಯಣ ಭಟ್, ಡಿ.ಯೋಗೇಶ ಕಾರಂತ್, ಶಿವಾನಂದ ಕೊಡಂಚ, ಸೀತಾರಾಮ ಹೊಳ್ಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಆಡಳಿತ ಮೊಕ್ತೇಸರ ಜಿ.ಭಾಸ್ಕರ ಕಲೈಕಾರ್, ಅಭಿವೃದ್ಧಿ ಸಮಿತಿ ಸದಸ್ಯರು, ಶ್ರೀ ವರಮಹಾಲಕ್ಷ್ಮೀ ಮಹಿಳಾ ಸಮಿತಿ ಸದಸ್ಯೆಯರು, ಉಪಸ್ಥಿತರಿದ್ದರು. ಆ.17ರಂದು ಏಕಾಹ ಭಜನೆ ಸಮಾಪನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net