ಪಾಡಿಯಲ್ಲಿ ಏಕಾದಶ ಮಹಾರುದ್ರಾಭಿಷೇಕ

Ksd_Edaneeru
Published on

ಕಾಸರಗೋಡು: ಎಡನೀರು ಸನಿಹದ ಪಾಡಿ ಕೈಲಾರ್ ಶ್ರೀ ಶಿವಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ, ಏಕಾದಶ ಮಹಾರುದ್ರಾಭಿಷೇಕ ಹಾಗೂ ಶಾಶ್ವತ ಚಪ್ಪರ ಸಮರ್ಪಣಾ ಕಾರ್ಯಕ್ರಮ ಫೆ.26ರಂದು ಜರುಗಲಿದೆ. ಅಂದು ಬೆಳಗ್ಗೆ 8.15ಕ್ಕೆ ರುದ್ರಪಾರಾಯಣ, ಸಂಕಲ್ಪಾಭಿಷೇಕ, ಏಕಾದಶ ರುದ್ರಾಬಿಷೇಕ, ಭಜನೆ, ಕುಣಿತ ಭಜನೆ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ನಡೆಯುವ ಚಪ್ಪರ ಸಮರ್ಪಣಾ ಸಮಾರಂಭದಲ್ಲಿ ಹರಿಹರ ಸೇವಾ ಸಮಿತಿ ಅಧ್ಯಕ್ಷ ಎಂ.ಜೆ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಾಶ್ವತ ಚಪ್ಪರ ಲೋಕಾರ್ಪಣೆಗೈಯಲಿದ್ದಾರೆ. ಬ್ರಹ್ಮಶ್ರೀ ಇರುವೈಲು ಕೇಶವ ತಂತ್ರಿ ದಿವ್ಯ ಉಪಸ್ಥಿತರಿರುವರು. ಡಾ.ಮಣಿಕಂಠನ್ ಮೇಲತ್, ಸಂಗೀತ ಮತ್ತು ನೃತ್ಯ ನಿರ್ದೇಶಕಿ ರಾಜೇಶ್ವರೀ ಭಟ್, ಇ. ಕುಞಿರಾಮನ್ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net