ಯವಕನಿಂದ ಚಾಕು ಇರಿತ; 8ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಚಾಕು ಇರಿತ
Published on

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು,ಮತ್ತೊಂದು ಗುಂಪಿನ ಯುವಕನೊಬ್ಬ ಚಾಕು ಇರಿದಿದ್ದಾನೆ. ಈತನ ಕೃತ್ಯದಿಂದ ಎಂಟಕ್ಕೈ ಹೆಚ್ಚು ಜನರು ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾ ನಗರ (ತಡಸ ತಾಂಡಾ)ದಲ್ಲಿ ಘಟನೆ ನಡೆದಿದೆ.

ಗಲಾಟೆಯಲ್ಲಿ ರವಿ ಲಮಾಣಿ, ಶಂಕರ್ ಲಮಾಣಿ, ರಾಜು ಲಮಾಣಿ, ಮಹೇಶ ಲಮಾಣಿ, ಲಾಲಪ್ಪ ಲಮಾಣಿ, ಹನುಮಂತ ಪೂಜಾರಿ, ಅಕ್ಷಯ ಲಾಮಣಿ ಚಾಕು ಇರಿತಕ್ಕೊಳಗಾದವರು. ಘಟನೆಯಲ್ಲಿ‌ ಓರ್ವನ ಕೈ ಬೆರಳು ಕತ್ತರಿಸಲ್ಪಟ್ಟಿದೆ. ಎಂಟು ಜನರಿಗೂ ತಲೆಯ ಭಾಗ, ಕೈ, ಬೆನ್ನು ಸೇರಿ ದೇಹದ ಇತರ ಭಾಗದಲ್ಲಿ ಗಾಯಗಳಾಗಿವೆ.

ಗ್ರಾಮದ ಸುರೇಶ ಲಮಾಣಿ, ರಾಜು ಲಮಾಣಿ, ಲಕ್ಷ್ಮಣ ಲಮಾಣಿ, ಅಶೋಕ ಲಮಾಣಿ, ಪ್ರವೀಣ ಲಾಮಣಿ, ರವಿ ಹನುಮಂತ ಸೇರಿ ಎಂಟು ಜನರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ತಂಡದಲ್ಲಿದ್ದ ಸುರೇಶ ಲಮಾಣಿ ಎಂಬಾತ ಮನಬಂದಂತೆ ಚಾಕುವಿನಲ್ಲಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಕೈಯಲ್ಲಿ ಚಾಕು, ಕೋಲು ಕಾರದ ಪುಡಿ ಎರಚಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net