ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ; 8 ನಕ್ಸಲರ ಬಂಧನ

nax
Published on

ಸುಕ್ಮಾ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭಾರೀ ಯಶಸ್ಸನ್ನು ಸಾಧಿಸಿರುವ ಭದ್ರತಾ ಪಡೆ ಸಿಬ್ಬಂದಿ ಇಂದು (ಶನಿವಾರ) ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಎಂಟು ನಕ್ಸಲರನ್ನು ಬಂಧಿಸಲಾಗಿದ್ದು, ಇವರಲ್ಲಿ ಒಬ್ಬರಿಗೆ 1 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ಬಸ್ತಾರ್ ಫೈಟರ್ಸ್ ಮತ್ತು ಕೇಂದ್ರ ಮೀಸಲು ಪೊಲೀಸ್​ ಪಡೆ (ಸಿಆರ್‌ಪಿಎಫ್) ತಂಡವು ಶುಕ್ರವಾರ ಜಾಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಬೈನಪಲ್ಲಿ ಗ್ರಾಮದ ಬಳಿ ಜಂಟಿ ಕಾರ್ಯಾಚರಣೆ ನಡೆಸಿ ನಕ್ಸಲರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತರಲ್ಲಿ ಮುಚಕಿ ಪಾಲ (33) ಸೇನಾ ಕಮಾಂಡರ್ ಆಗಿದ್ದು, ಈತನ ತಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿತ್ತು, ಮಡ್ಕಂ ಸನ್ನು (40) ಉಪ ಸೇನಾ ಕಮಾಂಡರ್ ಆಗಿದ್ದಾನೆ. ಉಳಿದವರು ಮಾವೋವಾದಿಗಳ ಹೋರಾಟ ಪಡೆಯ ಸದಸ್ಯರಾಗಿ ಸಕ್ರಿಯರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರಿಂದ ನಾಲ್ಕು ಜಿಲೆಟಿನ್ ರಾಡ್‌ಗಳು, 200 ಗ್ರಾಂ ಗನ್‌ಪೌಡರ್, ನಾಲ್ಕು ಡಿಟೋನೇಟರ್‌ಗಳು, ಕಾರ್ಡೆಕ್ಸ್ ವೈರ್, ಪೆನ್ಸಿಲ್ ಸೆಲ್‌ಗಳು ಮತ್ತು ಇತರ ಮಾವೋವಾದಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net