ಶಾಂತಿ, ಭಾವೈಕ್ಯತೆ ಜೀವನದಲ್ಲಿ ಅಳವಡಿಕೆ : ಕುಂಬೋಲ್ ತಂಙಳ್ ಸಯ್ಯಿದ್ ಆಲಿ ಅಭಿಮತ

New Project (41)
Published on

ಮೂಲ್ಕಿ: ಯುವ ಜನಾಂಗ ಶಾಂತಿ, ಸೌಹಾರ್ದತೆ, ಭಾವೈಕ್ಯತೆ ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಬೇಕು ಎಂದು ಕುಂಬೋಲ್ ತಂಙಳ್ ಸಯ್ಯಿದ್ ಆಲಿ ಹೇಳಿದರು.

ಮೂಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿ ಆವರಣದಲ್ಲಿ ಗುರುವಾರ ಈದ್ ಮಿಲಾದ್ ಸಮಾರೋಪ ಸಮಾರಂಭದಲ್ಲಿ ಮೂಲ್ಕಿ ಶಾಫಿ ಜುಮಾ ಮಸ್ಜಿದ್ ಜಮಾತ್‌ನ ನವೀಕೃತ ದರ್ಗಾ ಉದ್ಘಾಟಿಸಿ ಮಾತನಾಡಿದರು.

ಮೂಲ್ಕಿ ಶಾಫಿ ಜುಮಾ ಮಸೀದಿ ಖತೀಬ ಹಾಜಿ ಉಸ್ಮಾನುಲ್ ಫೈಝಿ ತೋಡಾರು ದುವಾ ನೆರವೇರಿಸಿದರು. ಸಮಾರೋಪ ಸಮಾರಂಭ ಪಯ್ಯನೂರು ಎಝ್ಮುಲ ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಅಲ್ ಬುಖಾರಿ ಉದ್ಘಾಟಿಸಿದರು.

ಮೂಲ್ಕಿ ಶಾಫಿ ಜುಮಾ ಮಸೀದಿ ಅಧ್ಯಕ್ಷ ಸುಹೈಲ್ ಹೈದರ್ ಎಂ.ಜೆ.ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ನಪಂ ಸದಸ್ಯ ಪುತ್ತು ಬಾವ, ಮಸೀದಿ ಕೋಶಾಧಿಕಾರಿ ಇಕ್ಬಾಲ್ ಅಹಮದ್, ಕಾರ್ನಾಡ್ ಮಸೀದಿ ಖತೀಬ ರಿಯಾಝ್ ಫೈಝಿ, ಮೂಲ್ಕಿ ಶಾಫಿ ಜುಮಾ ಮಸೀದಿ ಗೌರವಾಧ್ಯಕ್ಷ ಇನಾಯತ್ ಆಲಿ, ಜಿಲ್ಲಾ ವಕ್ಫ್ ಅಧಿಕಾರಿ ಎಂ.ಅಬೂಬಕ್ಕರ್, ಮಸೀದಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಫಾರೂಕ್, ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ರಿಯಾಝ್, ನುಸ್ರುತುಲ್ ಮಸಾಕೀನ್ ಅಧ್ಯಕ್ಷ ಅಮಾನುಲ್ಲಾ, ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲ್ಪಾಝ್, ಮಸೀದಿ ಜತೆ ಕಾರ್ಯದರ್ಶಿ ಕೆ.ಎ.ಇಬ್ರಾಹಿಂ ಉಪಸ್ಥಿತರಿದ್ದರು. ತಯ್ಯೂಬ್ ಫೈಝಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net