ಬ್ರಹ್ಮಾವರ: ಕರಾವಳಿ ಜಿಲ್ಲೆ ಶಿಕ್ಷಣದ ಜತೆಗೆ ಕಲೆ ಸಂಸ್ಕೃತಿಗಳ ಮೂಲಕ ಬದುಕಿನ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದೆ ಎಂದು ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಹೇಳಿದರು.
ಪರ್ಕಳದಲ್ಲಿ ಭಾನುವಾರ ಮಂಗಳ ಕಲಾ ಸಾಹಿತ್ಯ ವೇದಿಕೆಯ 21ನೇ ವರ್ಷದ ಅಂಗವಾಗಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಸಮಾಗಮ ಕಲಾಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀನಿವಾಸ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪದ್ಮಶ್ರೀ ಪುರಸ್ಕೃತ ಆಮೈ ಮಹಾಲಿಂಗ ನಾಯ್ಕ, ನಟರಾದ ಯೋಗೀಶ್ ಶೆಟ್ಟಿ ಧರ್ಮೆಮಾರ್, ಭೋಜರಾಜ ವಾಮಂಜೂರು, ಮಂಜುನಾಥ್ ಉಪಾಧ್ಯ, ಬೂಧ ಶೆಟ್ಟಿಗಾರ್, ಶ್ರೀಧರ್ ಭಟ್ ನೆಲ್ಲಿಕಟ್ಟೆ, ಸಂದೀಪ್ ನಾಯ್ಕ ಕಬ್ಯಾಡಿ, ನೆಂಪು ನರಸಿಂಹ ಭಟ್ ಪರ್ಕಳ, ಭುವನಾ ಪ್ರಸಾದ್ ಹೆಗ್ಡೆ ಮಣಿಪಾಲ, ಪ್ರಕಾಶ್ ಶೆಣೈ ಪರ್ಕಳ ಉಪಸ್ಥಿತರಿದ್ದರು. ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.