

Digestion Problem: ಇಂದಿನ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ಊಟ ಮುಗಿಸಿದ ನಂತರ ನೀರು ಕುಡಿದು ನೇರವಾಗಿ ಮಲಗುತ್ತಾರೆ. ಈ ರೀತಿ ಮಾಡುವುದರಿಂದ ದೇಹದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದು ಸಾಮಾನ್ಯವಾಗಿ ಯಾರಿಗೂ ತಿಳಿದಿಲ್ಲ. ನಮ್ಮ ಅಜ್ಜ-ಅಜ್ಜಿಯರ ಕಾಲದಲ್ಲಿ ಊಟ ಮಾಡಿದ ನಂತರ ಕೆಲವೊಂದು ಮಸಾಲೆ ಪದಾರ್ಥಗಳನ್ನು ತಿನ್ನುವ ಅಭ್ಯಾಸವಿತ್ತು, ಏಕೆಂದರೆ ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ವೈಜ್ಞಾನಿಕ ಕಾರಣದಲ್ಲಿದ್ದವು.
ಇಂದಿನ ಪೀಳಿಗೆ ಒತ್ತಡ ಜೀವನದಲ್ಲಿ ಈ ಎಲ್ಲಾ ವಿಷಯಗಳನ್ನು ನಿರ್ಲಕ್ಷಿಸುವುದರ ಜೊತೆಗೆ ಗ್ಯಾಸ್ಟ್ರಿಕ್, ಉಬ್ಬರ, ಆಮ್ಲೀಯತೆಯಂತಹ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ. ಹಾಗಾಗಿ ಇಂತಹ ಸಮಸ್ಯೆಯಿಂದ ದೂರ ಉಳಿಯಲು ನೀವು ಪ್ರತಿನಿತ್ಯ ಊಟದ ನಂತರ ಈ ಪದಾರ್ಥಗಳನ್ನು ಸೇವಿಸಿ...
ಪ್ರತಿನಿತ್ಯ ಆಹಾರವನ್ನು ಸೇವಿಸಿದ ನಂತರ ಬಾಯಿಗೆ ಸ್ವಲ್ಪ ಜೀರಿಗೆ ಅಥವಾ ಮೆಂತ್ಯೆ ಕಾಳುಗಳನ್ನು ಜಗಿಯುವುದರಿಂದ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಈ ಎರಡೂ ಪದಾರ್ಥಗಳು ಹೊಟ್ಟೆಯಲ್ಲಿರುವ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ತೂಕ ಕಡಿಮೆ ಮಾಡುವಲ್ಲಿ ಸಹಾಯ ಮಾಡಿ, ಮೆಟಬಾಲಿಸಂ ಅನ್ನು ಹೆಚ್ಚಿಸುತ್ತದೆ. ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಡಿಟಾಕ್ಸ್ ಮಾಡುತ್ತದೆ. ಇದನ್ನು ಪ್ರತಿನಿತ್ಯ ಬಳಸುವುದರಿಂದ IBS ಸಮಸ್ಯೆಗಳನ್ನು ನಿವಾರಿಸುತ್ತದೆ.
2 ಏಲಕ್ಕಿಯನ್ನು ಊಟ ಆದ ನಂತರ ಸೇವಿಸುವುದರಿಂದ ಇದು ಆಹಾರವನ್ನು ಜೀರ್ಣ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಖನಿಜಗಳು ಬಾಯಿಯನ್ನು ಸ್ವಚ್ಛವಾಗಿರುವಂತೆ ಮಾಡುತ್ತದೆ. ಏಲಕ್ಕಿಯಲ್ಲಿರುವ ಉತ್ಕರ್ಷಣ ಗುಣಗಳು ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೆಯೇ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. ಇದು ತೂಕ ಕಡಿಮೆ ಮಾಡುವಲ್ಲಿ ಮಧ್ಯಸ್ಥಿಕೆ ವಹಿಸಿ, ಆಂಟಿ ಆಕ್ಸಿಡೆಂಟ್ಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಊಟದ ನಂತರ ಕೊತ್ತುಂಬರಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೇ ಹೊಟ್ಟೆ ನೋವು ಮತ್ತು IBS ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕೊತ್ತುಂಬರಿ ನೀರು ದೇಹಕ್ಕೆ ತಂಪಾಗಿಸುವುದನ್ನು ಮಾಡುವುದರಿಂದ ಇದನ್ನು ಪ್ರತಿನಿತ್ಯ ಸೇವಿಸುವುದು ಉತ್ತಮವಾಗಿದೆ.
ಊಟದ ನಂತರ 2 ಅಥವಾ 3 ಪುದಿನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಎಲೆಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಕೆಲವು ಜನರು ಊಟ ಆದ ನಂತರ ಹೊಟ್ಟೆಯ ಭಾರವನ್ನು ಅನುಭವಿಸುತ್ತಾರೆ. ಅಂತವರು ಪುದೀನ ಎಲೆಗಳನ್ನು ತಿನ್ನುವುದರಿಂದ ಉಬ್ಬರ ಕಡಿಮೆಯಾಗುತ್ತದೆ.
ಲವಂಗವು ಯುಜೆನಾಲ್ ನಂಜುನಿರೋಧಕ ಗುಣಗನ್ನು ಹೊಂದಿದೆ. ಇದನ್ನು ಊಟ ಆದ ನಂತರ ನಿಮ್ಮ ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಇದು ನಿಮ್ಮ ಬಾಯಿಯಲ್ಲಿರುವ ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಅದರ ಜೊತೆಗೆ ನಿಮ್ಮ ಬಾಯಿಯನ್ನು ಸ್ವಚ್ಛವಾಗಿಟ್ಟು, ಜೀರ್ಣಕ್ರಿಯೆ ಆಗಲು ಸಹಾಯ ಮಾಡುತ್ತದೆ. ಪ್ರತಿನಿತ್ಯ 2 ಲವಂಗ ಸೇವಿಸುವುದರಿಂದ ಬಾಯಿ ಹುಣ್ಣನ್ನು ತಡೆಯಲು ಸಹಾಯವಾಗುತ್ತದೆ.(ಏಜೆನ್ಸೀಸ್)